ಭಂಕೂರ: ಗಮನ ಸೆಳೆದ ದಾಖಲಾತಿ ಆಂದೋಲನ
ಕಲಬುರಗಿ,ಜು.4-ಭಂಕೂರ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಅಶೋಕ ಲೇಲ್ಯಾಂಡ್ ಲನಿ9ಂಗ್ ಲಿಂಕ್ಸ್ ಫೌಂಡೇಶನ್ ರೋಡ್ ಟು ಸ್ಕೂಲ್ ಸಹಯೋಗದಲ್ಲಿ ದಾಖಲಾತಿ ಆಂದೋಲನ ಕಾಯ9ಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಹಸಿರೆಲೆಯಿಂದ ಶೃಂಗಾರಗೊಂಡ ಎತ್ತಿನ ಬಂಡಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು, ಬಣ್ಣ ಬಣ್ಣದ ವೇಷ ತೊಟ್ಟು ಮಕ್ಕಳು ಸರಸ್ವತಿ ವಿದ್ಯಾ ದೇವತೆಯಾಗಿ ಕಂಗೊಳಿಸಿದರು. ಕೋಲಾಟ ನೃತ್ಯ ನೋಡುತ್ತ ನಾಡಿನ ಕಲೆ, ಸಂಸ್ಕøತಿಯ ವೈಭವವನ್ನು ಗ್ರಾಮದ ಜನರು ಬೆರಗಾಗಿ ನೋಡಿ ಕಣ್ತುಂಬಿಕೊಂಡರು. ಶಿಕ್ಷಕರು ಮಕ್ಕಳ ದಾಖಲಾತಿ ಕುರಿತು, ಸರಕಾರಿ ಸೌಲಭ್ಯಗಳ ಬಗ್ಗೆ , ಶಿಕ್ಷಣದ ಮೌಲ್ಯಗಳನ್ನು ಪಾಲಕರಲ್ಲಿ ಜಾಗೃತಿ ಮೂಡಿಸಿದರು ದಾಖಲಾತಿ ಆಂದೋಲನ ಉದ್ದೇಶಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅಧ್ಯಕ್ಷ ಶರಣಬಸಪ್ಪ ಧನ್ನ ಅವರು, “ದಾಖಲಾತಿ ಪಡೆಯದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಸರಕಾರಿ ಶಾಲೆಯ ಸೌಲಭ್ಯ ಉಚಿತ ಪಠ್ಯ ಪುಸ್ತಕ ಬೋಧನಾ ಸಮಗ್ರಿ ಬಿಸಿಯೂಟ ಯೋಜನೆಗಳು ಸಾಮಜಿಕ ಬೆಳವಣಿಗೆಗೆ ಅವಶ್ಯಕ ಎಂದು ಹೇಳಿದರು.
ಶಿಕ್ಷಣ ಪ್ರತಿಯೊಬ್ಬರ ಹಕ್ಕು ಅದನ್ನು ವಿದ್ಯಾರ್ಥಿಗಳಿಗೆ ದೊರಕಿಸಬೇಕಾಗಿರುವುದು ಶಿಕ್ಷಕರ ಕತ9ವ್ಯವಾಗಿದೆ ಎಂದರು. ಭಂಕೂರ ವಲಯ ಸಿರಸಿ ಮರೆಪ್ಪ ಭಜಂತ್ರಿ, ಮುಖ್ಯಗುರು ಕನಕಪ್ಪ ನಾಗೇರಿ, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಆಂದೋಲನದಲ್ಲಿ ಭಾಗವಹಿಸಿದ್ದರು.
ಎಲ್‍ಎಲ್‍ಎಫ್ ಹಿರಿಯ ಸಂಪನ್ಮೂಲ ವ್ಯಕ್ತಿ ಸವಿತಾ ಸಿ ಅವರು ಮಾತನಾಡಿ, ಅಶೋಕ್ ಲೇಲ್ಯಾಂಡ್ ಮತ್ತು ಎಲ್‍ಎಲ್‍ಎಫ್ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಶ್ರಮಿಸುತಿವೆ ಎಂದರು. ಭಂಕೂರ ವಲಯ ಸಿರಸಿ ಮರೆಪ್ಪ ಭಜಂತ್ರಿ ಮುಖ್ಯಗುರುಗಳು ಕನಕಪ್ಪ ನಾಗೇರಿ .ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದರು.
ಸಂಪನ್ಮೂಲ ಶಿಕ್ಷಕರಾದ ಸಾವಿತ್ರಿ, ಪ್ರಿಯ, ಭೀಮಬಾಯಿ, ಅಂಜನಾ, ರೇಷ್ಮಾ, ವಿಜಯಮ್ಮ, ರಾಧಿಕಾ, ಆಲಮಸಬೇಗಂ ಇತರರಿದ್ದರು .