ಕೋಡ್ಲಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಚುನಾವಣೆ, ಶಾಲಾ ಸಂಸತ್ತು ರಚನೆ
ಕಾಳಗಿ,ಜು.4-ತಾಲ್ಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 2024-25 ನೇ ಶೈಕಣಿಕ ಸಾಲಿನ ಶಾಲಾ ಸಂಸತ್ ರಚನೆ ಸಂಬಂಧ ಬುಧುವಾರ ಚುನಾವಣೆ ನಡೆಯಿತು.
ಚುನಾವಣಾ ಅಧಿಸೂಚನೆ ಹೊರಡಿಸಿ ನಾಮಪತ್ರ ಸಲ್ಲಿಸುವುದು, ವಾಪಸ್ ತೆಗೆದುಕೊಳ್ಳುವುದು,ಅಣುಕು ಮತದಾನ,ತೋರು ಬೆರಳಿಗೆ ಶಾಹಿ ಹಚ್ಚುವುದು ಸೇರಿದಂತೆ ಚುನಾವಣೆಯಲ್ಲಿ ಅನುಸರಿಸುವ ಬಹುತೇಕ ವಿಧಾನಗಳನ್ನು ಅನುಸರಿಸಲಾಯಿತು.ಸರದಿ ಸಾಲಿನಲ್ಲಿ ನಿಂತು ವಿದ್ಯಾರ್ಥಿನಿಯರು ಇವಿಎಂ ಆ್ಯಪ್ ಮೂಲಕ ಮತ ಚಲಾಯಿಸಿದರು. ಹೊಸ ಮತದಾರರು( 6 ನೇ ತರಗತಿ) ಉತ್ಸಾಹದಿಂದ ಮತದಾನ ಮಾಡುವುದು ಕಂಡು ಬಂತು.
ಪ್ರಾಚಾರ್ಯ ಡಾ.ರಾಜಶೇಖರ ಮಾಂಗ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಶಿವಾನಂದ ಬೀಳಗಿ,ನಾಗಶೆಟ್ಟಿ,ಅಶೋಕ,ತುಕಾರಾಮ,ಮಹಾನಂದ,ರೇಖಾ, ಸಾಲೇಹ ಫರೀನ್, ಶಿವಕುಮಾರ ಹಿರೇಮಠ,ಬಸವರಾಜ, ಭಾಗ್ಯ ಜ್ಯೋತಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆ ಅಚ್ಚುಕಟ್ಟಾಗಿ ನಿರ್ವಹಿಸಿದರು.ನಂತರ ಮತ ಎಣಿಕೆ ನಡೆದು ಮಂತ್ರಿ ಮಂಡಲ ರಚಿಸಲಾಯಿತು.
ಮಂತ್ರಿ ಮಂಡಲ ವಿವರ:
ಗೀತಾ ಭೀಮಸಿಂಗ್( ಪ್ರಧಾನಿ), ಅನುರಾಧಾ, ಪ್ರಿಯಾ ( ಶಿಕ್ಷಣ ಮಂತ್ರಿಗಳು),ನಾವಿನ್ಯ ಸೂರ್ಯಕಾಂತ( ಆರೋಗ್ಯ ಮಂತ್ರಿ),ರಂಜಿತಾ ವೆಂಕಟೇಶ, ಪ್ರಜ್ಞಾ ಪರಮೇಶ್ವರ (ಆಹಾರ ಮಂತ್ರಿಗಳು),ಕೀರ್ತಿ ಲೋಕೇಶ್, ಸ್ನೇಹಾ ಅಶೋಕ(ಶಿಸ್ತು ಮತ್ತು ಸ್ವಚ್ಚತಾ ಮಂತ್ರಿ), ಶೃತಿ ಸೂರ್ಯಕಾಂತ,ಐಶಾ ಸಂತೋಷ (ಸಾಂಸ್ಕøತಿಕ ಮಂತ್ರಿಗಳು), ಲಕ್ಷ್ಮೀಬಾಯಿ ಶಿವರಾಮ,ಅನುಶ್ರೀ ನರಸಪ್ಪ(ಕ್ರೀಡಾ ಮಂತ್ರಿಗಳು), ಶಾಲಿನಿ ದಶರಥ (ಪರಿಸರ ಮತ್ತು ಅರಣ್ಯ ಮಂತ್ರಿ), ಕಾವೇರಿ ತುಕಾರಾಮ(ಪ್ರವಾಸ ಮಂತ್ರಿ), ಕರೀನಾ ತುಕಾರಾಮ,ಶಿಲ್ಪಾ ನಾಗೇಂದ್ರಪ್ಪ( ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ).