ಪುಟ್ಟಪಾತ ಅಂಗಡಿಗಳು ತೆರೆವುಗೊಳಿಸುವ ಕಾರ್ಯಾಚರಣೆ ಆರಂಭ
ಚಿಟಗುಪ್ಪ:ಜು.4: ಪಟ್ಟಣದಲ್ಲಿ ಪುಟ್ ಪಾತ್ ಮೇಲೆ ಜಿಲ್ಲಾಡಳಿತ ಆದೇಶದಂತೆ ಪಟ್ಟಣದ ಪುಟ್ ಪಾತ್ ಮೇಲೆ ಇರುವ ಅಂಗಡಿಗಳು ನಡೆಸುತ್ತಿದ್ದ ವ್ಯಾಪಾರಸ್ಥರಿಗೆ ತೆರವುಗೊಳಿಸಲು ಸೂಚಿಸಿದರು ಕೂಡ ಅಂಗಡಿಗಳು ತೆರೆವುಗೊಳಿಸದೆ ಇದುದ್ದಕ್ಕಾಗಿ ಗುರುವಾರ ಬೆಳ್ಳಂಬೆಳಗೆ ಪ್ರಮುಖ ರಸ್ತೆಗಳಲ್ಲಿ ತಹಸಿಲ್ದಾರ್ ರವೀಂದ್ರ ದಾಮಾ, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದೀನ್ ಬಾಬಾ, ಸಿಪಿಐ ಶ್ರೀನಿವಾಸ ಅಲ್ಲಾಪುರೇ ನೇತೃತ್ವದಲ್ಲಿ ಪುಟ್ ಪಾತ್ ತೆರವು ಕಾರ್ಯಚರಣೆ ನಡೆಯಿತು.
ಪೆÇಲೀಸ್ ಇಲಾಖೆ ನೆರವಿನೊಂದಿಗೆ ಪಟ್ಟಣದ ಪ್ರಮುಖ ರಸ್ತೆಯ ಪುಟ್ ಪಾತ್ ಮೇಲೆ ಅಂಗಡಿಗಳು ತೆರೆವುಗೊಳಿಸಿದರು. ಪುರಸಭೆ ಸಿಬ್ಬಂದಿ ವರ್ಗ ಜೆಸಿಬಿ ಜೊತೆಗೆ ರಸ್ತೆಯಲ್ಲಿ ಸಂಚರಿಸಿ ಅಂಗಡಿಗಳು ತೆರೆವುಗೊಳಿಸಿದರು. ತಹಶೀಲ್ದಾರ್ ರವೀಂದ್ರ ದಾಮಾ ಮಾತನಾಡಿ ಬೆಳಿಗ್ಗೆ 6 ಘಂಟೆಯಿಂದ ಪುರಸಭೆ, ಪೆÇಲೀಸ್ ಇಲಾಖೆ ಸಯೋಗದೊಂದಿಗೆ ಅತಿಕ್ರಮಣ ಶೇಡಗಳು ತೆರವುಗೊಳಿಸಲಾಗಿದೆ ಈ ಕಾರ್ಯಕ್ಕೆ ಪಟ್ಟಣದ ನಾಗರಿಕರು, ವ್ಯಾಪಾರಸ್ಥರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು. ಶುಕ್ರವಾರವು ಬೆಳಿಗ್ಗೆ 6 ಘಂಟೆಯಿಂದ ತೆರವು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಹಶೀಲ್ದಾರ್ ದಾಮಾ ತಿಳಿಸಿದ್ದಾರೆ.
ಈ ಕಾರ್ಯಚಾರಣೆಯಲ್ಲಿ ಪುರಸಭೆ, ಕಂದಾಯ ಇಲಾಖೆ, ಪೆÇಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು.