ಮೃತಪಟ್ಟ ಕುಟುಂಬಕ್ಕೆ 3ಲಕ್ಷ ಪರಿಹಾರ ನೀಡಿದ ಸಚಿವ ಶಿವಾನಂದ್ ಪಾಟೀಲ್
ಕೊಲ್ಹಾರ: ಜು.4:ತೆಪ್ಪ ದುರಂತದಲ್ಲಿ ಸಾವನಪ್ಪಿದ ಪುಂಡಲೀಕ ಯಂಕಂಚಿ, ದಶರಥ ಗೌಡರ ಸೂಳಿಬಾವಿ, ತಯ್ಯಬ್ ಚೌಧರಿ, ಮಹಿಬೂಬ ವಾಲಿಕಾರ, ರಫೀಕ್ ಬಾಂಬೆ ಮನೆಗೆ ಸಚಿವ ಶಿವಾನಂದ ಪಾಟೀಲ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ಮೃತಪಟ್ಟ 5 ಜನ ಕುಟುಂಬದವರಿಗೆ ವೈಯಕ್ತಿಕವಾಗಿ 3ಲಕ್ಷ ಪರಿಹಾರ ನೀಡಿದರು.
ಘಟನಾಸ್ಥಳದಲ್ಲಿ ಪರಿಶೀಲನೆ ನಡೆಸಿ ಎಸ್ಪಿ, ಡಿಸಿ ಅವರಿಂದ ಮಾಹಿತಿ ಪಡೆದ ಸಚಿವರು ಶವ ಪತ್ತೆ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದು ಪರಿಶೀಲನೆ ಬಳಿಕ ಇದೊಂದು ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು ಈ ದುರ್ಘಟನೆ ನಡೆಯಬಾರದಿತ್ತು ಮೇಲ್ನೋಟಕ್ಕೆ ಅವರು ಇಸ್ಪೀಟ್ ಆಡುವಾಗ ಪಿಎಸ್‍ಐ ರೇಡ್ ಮಾಡಿದ್ರು ಎನ್ನಲಾಗ್ತಿದೆ
ಗ್ರಾಮಸ್ಥರಿಂದಲು ಮಾಹಿತಿ ಪಡೆಯುವೆ ಈ ಘಟನೆಗೆ ವಿಷಾದ ವ್ಯಕ್ತಪಡೆಸುತ್ತೇನೆ ಅನೇಕ ಯುವಕರು ವಿವಾಹಿತರು, ಅವಿವಾಹಿತರು ಇದ್ದಾರೆ ಅವರ ಜೊತೆಗೆ ಮಾತನಾಡಿದಾಗ ಸಂಕಷ್ಟ ಅರ್ಥವಾಗುತ್ತೆ ಬಳಿಕ ಪರಿಹಾರದ ಬಗ್ಗೆ ಮಾಹಿತಿ ನೀಡ್ತೇನೆ ಈ ಘಟನೆಯಲ್ಲಿ ಎರಡು ವರ್ಷನ್ ಇವೆ ಇಸ್ಪೀಟ್ ಆಡ್ತಿದ್ರು ಎನ್ನುವ ಮಾತುಗಳಿವೆ, ಜನರ ವರ್ಶನ್ ಬೇರೆ ಇದೆ.
ಸರ್ಕಾರದಿಂದ ಪರಿಹಾರ ಕೊಡಲು ಬಂದ್ರೆ ಪರಿಹಾರ ಕೊಡ್ತೇವೆ. ಯಾವ ರೀತಿ ಸಹಾಯ ಮಾಡಲು ಸಾಧ್ಯ ಸಹಾಯ ಮಾಡುವೆ ಮೃತ ದೇಹಗಳು ಸಿಗುತ್ತವೆ
ಈಜು ಬರೋರು ಈಜಿ ಹೊರಗೆ ಬಂದಿದ್ದಾರೆ, ಈಜು ಬಾರದವರು ಸಿಕ್ಕಿಕೊಂಡಿದ್ದಾರೆ ವಿಜಯಪುರ ಜಿಲ್ಲೆಯಲ್ಲಿ ಗ್ಯಾಂಬ್ಲಿಂಗ್ (ಜೂಜು) ಹೆಚ್ಚಾಗಿದೆ ಎನ್ನುವ ಆರೋಪ ವಿಚಾರ ಜಿಲ್ಲೆಯಲ್ಲಿ ಗಣ್ಯರೇ ಗ್ಯಾಮ್ಲಿಂಗ್ ಆಡಿಸ್ತಾರೆ ಎನ್ನುವ ಮಾಹಿತಿ ಇದೆ ಜನರು ಸಾಕ್ಷಿ ಸಮೇತ ಮಾಹಿತಿ ಕೊಡ್ತಿಲ್ಲ ಈ ವಿಚಾರ ಐಜಿ ಎಸ್ಪಿ ಜೊತೆಗೆ ಹಂಚಿಕೊಂಡಿದ್ದೇನೆ ನಾನು ಸಹ ಐಜಿ ಅವರಿಗೆ ಮಾಹಿತಿ ಹಂಚಿಕೊಂಡಿದ್ದೆ ಗಣ್ಯರೆ ಜೂಜು ಆಡಿಸ್ತಾರೆ ಎಷ್ಟೇ ಬಲಾಢ್ಯರಿದ್ದರು ಅವರ ಮೇಲೆ ಕ್ರಮ ಕೈಗೊಳ್ಳಬೇಕು ಯಾರೇ ಆದರೂ ಜೂಜು ಆಡಿಸಬಾರದು ಈ ಘಟನೆ ಸಮಾಜವೇ ತಲೆ ತಗ್ಗಿಸುವಂತದ್ದು ಇಂಥ ಕೆಲಸಗಳಿಗೆ ಪ್ರೇರಣೆ ನೀಡಬಾರದು ಬಲಾಢ್ಯರು ಆಡಿಸ್ತಾರೆ, ಸಣ್ಣವರು ಆಡ್ತಾರೆ ಮೃತರ ಕುಟುಂಬಸ್ಥರಿಂದ ಪಿಎಸ್‍ಐ ವಿರುದ್ಧ ಗಂಭೀರ ಆರೋಪ ವಿಚಾರ ಕುಟುಂಬಸ್ಥರು ದೂರು ನೀಡಿದರೆ ಪಿಎಸ್‍ಐ ವಿರುದ್ಧ ತನಿಖೆ ನಡೆಸಲಾಗುತ್ತೆ ದೂರು ನೀಡದೆ ಇದ್ದರು ಪಿಎಸ್‍ಐ ವಿರುದ್ಧ ತನಿಖೆಗೆ ನಡೆಸುತ್ತೇವೆ ಎಂದರು ಪೆÇಲೀಸರು ಬಲಾಢ್ಯರು ಜೂಜು ಆಡಿಸುವಾಗ ಹಿಡಿಯದೆ ಇದ್ದರೆ ಸಣ್ಣ ಪುಟ್ಟ ಜನ ಜೂಜಲ್ಲಿ ಭಾಗಿಯಾಗ್ತಾರೆ ತನಿಖೆ ಬಳಿಕ ಸತ್ಯ ಬಯಲಿಗೆ ಬರಲಿದೆ.ಇಡೀ ಘಟನೆ ಸಿಎಂ ಗಮನಕ್ಕೆ ತಂದಿದ್ದೇನೆ ಡಿಸಿ-ಎಸ್ಪಿ ತನಿಖೆ ಬಳಿಕ ಮಾಹಿತಿ ನೀಡುತ್ತೇನೆ ಎಂದು ಸಚಿವ ಶಿವಾನಂದ್ ಪಾಟೀಲ್ ಹೇಳಿದರು,
ಈ ವೇಳೆ ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ,ತಹಸೀಲ್ದಾರ್ ಎಸ್. ಎಸ್.ನಾಯಕಲ್ ಮಠ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಫೀಕ ಪಕಾಲಿ ಸೇರಿದಂತೆ ಅನೇಕರು ಇದ್ದರು.