ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ನ್ಯಾಮತಿ.ಸೆ.೨೭; ಸಾರ್ವಜನಿಕರಲ್ಲಿ ಗ್ರಾಮ ಆರೋಗ್ಯ ಪರಿಕಲ್ಪನೆ ಅರಿವು, ಎಲ್ಲರಿಗೂ ಆರೋಗ್ಯ ಕಾರ್ಯಕ್ರಮ ಕುರಿತು ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ನಡೆಯಿತು ಎಂದು ಕುಂಕುವ ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಪಿ.ಚಂದನ್ ಹೇಳಿದರು.  ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ‘ಗ್ರಾಮ ಆರೋಗ್ಯ’ ಅನುಷ್ಠಾನ ಕುರಿತು ಸರ್ವ ಸದಸ್ಯರು, ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯ ಪಡೆಯ ಮೂಲಕ ಸಮುದಾಯಕ್ಕೆ ತಲುಪಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನ್ಯಾಮತಿ ತಾಲ್ಲೂಕು ನೊಡೆಲ್ ಅಧಿಕಾರಿ ವಿನುತಾ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಜಯಪ್ಪ, ಆರೋಗ್ಯ ಇಲಾಖೆಯ ಅನಿತಾ, ಸಿಡಿಪಿಒ ಕಚೇರಿಯ ವಲಯ ಮೇಲ್ವಿಚಾರಕಿ ದಾಕ್ಷಾಯಣಿ ಪಾವಟೆ ಅವರು ಗ್ರಾಮ ಆರೋಗ್ಯದ ಉದ್ದೇಶ, ಅನುಷ್ಠಾನ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.ಉಪಾಧ್ಯಕ್ಷೆ ಶ್ರುತಿ ರುದ್ರೇಶ ಮತ್ತು ಸದಸ್ಯರು, ಕಾರ್ಯದರ್ಶಿ ಶಾಂತವೀರಯ್ಯ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯರು, ವಿವಿಧ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.