ವಿಜಯಪುರ: ಶಾಂತಿನಿಕೇತನ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರ
ವಿಜಯಪುರ,ಜು.4:ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶಾಂತಿನಿಕೇತನ ವಿಜ್ಞಾನ, ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಲೆಫ್ಟನಂಟ್ ಜನರಲ್ ರಮೇಶ ಹಲಗಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಓದುವ ರೀತಿ, ಮನಸ್ಸÀನ್ನು ಹೇಗೆ ನಿಗ್ರಹಿಸುವುದು, ಸಮಯ ಪ್ರಜ್ಞೆಯ ಬಗ್ಗೆ ತಿಳಿ ಹೇಳಿದರು.
ಮಕ್ಕಳು ದುಶ್ಚಟಕ್ಕೆ ಬಲಿಯಾಗಬಾರದು. ಶಿಸ್ತಿನಿಂದ ಇರಬೇಕು. ಪಾಲಕರಿಗೆ ಗೌರವ ಕೊಡಬೇಕು. ತಾವುಗಳು ಒಳ್ಳೆಯ ರೀತಿಯಲ್ಲಿ ಅಭ್ಯಾಸ ಮಾಡಿದರೆ ತಮ್ಮತಂದೆ-ತಾಯಿಯ ಹೆಸರು ಮತ್ತು ಸಂಸ್ಥೆಯ ಹೆಸರು ಬರುತ್ತದೆ. ಅಲ್ಲದೇ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಮಾಡಿದರು.
ಸಂಸ್ಥೆಯ ಚೇರಮನ್ ಡಾ. ಸುರೇಶ ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ನಡೆದು ಬಂದ ದಾರಿ, ಶಾಂತಿನಿಕೇತನ ಸಂಸ್ಥೆಯು ಯಾವಾಗಲೂ ಅತ್ಯುತ್ತಮ ಶಿಕ್ಷಣವನ್ನು ಕೊಡುತ್ತಾ ಬಂದಿದೆ. ಅಲ್ಲದೇ ಪ್ರತಿಯೊಬ್ಬ ಮಕ್ಕಳ ವೈಯಕ್ತಿಕ ಕಾಳಜಿಯನ್ನು ವಹಿಸಿಕೊಂಡು ಬಂದಿರುವುದರಿಂದ ಪಾಲಕರು ನಮ್ಮ ಸಂಸ್ಥೆಯ ಮೇಲೆ ಅಪಾರವಾದ ನಂಬಿಕೆಯನ್ನು ಇಟು ್ಟಅಧಿಕ ಸಂಖ್ಯೆಯಲ್ಲಿ ಪ್ರವೇಶವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಪ್ರತಿಭಾನ್ವೇಷÀಣಾ ಪರೀಕ್ಷಾ ಪುರಸ್ಕಾರ:
ಪ್ರತಿಭಾನ್ವೇಷÀಣಾ ಪರೀಕ್ಷೆ (ಟ್ಯಾಲೆಂಟ್ ಸರ್ಚ) ಎಪ್ರಿಲ್ 2024ರಲ್ಲಿ ನಡೆದ ಪರೀಕ್ಷೆಯಲ್ಲಿ ಪೂರ್ವಿ ಪಾಟೀಲ ಪ್ರಥಮ ಸ್ಥಾನ ಪಡೆದಿದ್ದಕ್ಕೆ ರೂ. 15000 ನಗದು ಪುರಸ್ಕಾರ ನೀಡಿ ಸನ್ಮಾನ ಮಾಡಲಾಯಿತು. ಸಂಜೋತಾ ವಸ್ಟಾರ ದ್ವಿತೀಯ ಸ್ಥಾನ ಗಳಿಸಿದ್ದಕ್ಕೆ ರೂ. 10,000 ನಗದು ನೀಡಿ ಸನ್ಮಾನ ಮಾಡಲಾಯಿತು. ಅಲ್ಲದೇ 2023-24ನೇ ಸಾಲಿನ ಪಿ.ಯು. ಬೋರ್ಡ್ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ನೀಡಿ ಸನ್ಮಾನ ಮಾಡಲಾಯಿತು. ನೀಟ್ ಮತ್ತು ಕೆ.ಸಿ.ಇ.ಟಿ. ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ನೀಡಿ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ, ನಿರ್ದೇಶಕ ಶರತ ಬಿರಾದಾರ, ಹಣಕಾಸು ಅಧಿಕಾರಿ ಭರತ ಬಿರಾದಾರ, ಡಾ. ವಿಷ್ಣುಪ್ರಿಯಾ ಬಿರಾದಾರ, ಪ್ರಾಚಾರ್ಯ ಪಿ.ಚರಣಕುಮಾರ, ಸಿ.ಬಿ.ಎಸ್.ಇ. ಶಾಲೆಯ ಪ್ರಾಂಶುಪಾಲ ರಿಜೇಶ ಪಿ.ಎನ್ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಪ್ರಾಚಾರ್ಯ ಶ್ರೀಧರ ಕುರಬೇಟ, ಪಾಲಕರು ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.