ಸಿದ್ದೇಶ್ವರ ಸಹಕಾರಿ ಬ್ಯಾಂಕಿನಲ್ಲಿ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಜನ್ಮ ದಿನೋತ್ಸವ ಆಚರಣೆ
ವಿಜಯಪುರ,ಜು.4: ನಗರದ ಶ್ರೀ ಸಿದ್ದೇಶ್ವರ ಕಲಾಭವನದಲ್ಲಿ ಮಂಗಳವಾರ ದಿನಾಂಕ: 02.07.2024 ರಂದು ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್.ವಿಜಯಪುರ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿಜಯಪುರ ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವಿಜಯಪುರ ಸಂಯುಕ್ತ ಆಶ್ರಯದಲ್ಲಿ ಬ್ಯಾಂಕಿನ ಸಂಸ್ಥಾಪಕÀ ವಚನಪಿತಾಮಹ ರಾವ ಬಹದ್ದೂರ್ ಡಾ. ಫ.ಗು. ಹಳಕಟ್ಟಿ ಅವರ ಜನ್ಮದಿನೋತ್ಸವ ಹಾಗೂ ವಚನ ಸಂರಕ್ಷಣಾ ದಿನಾಚರಣೆಯನ್ನು ಆಚರಿಸಲಾಯಿತು.
ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷÀ ವಿಜಯಕುಮಾರ ಇಜೇರಿ ಮಾತನಾಡಿ, ವ್ಯವಹಾರಕ್ಕೆ ಸಹಕಾರಿ ಬ್ಯಾಂಕ್ ನಿರ್ಮಿಸಿÀ ಈ ನಾಡಿಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಬರುವ ದಿನಗಳಲ್ಲಿ ಹೊರ ಜಿಲ್ಲೆಗಳಲ್ಲಿ ನಮ್ಮ ಬ್ಯಾಂಕಿನ ಶಾಖೆಗಳನ್ನು ಪ್ರಾರಂಭಿಸಲಾಗುವುದು ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.
ಕಾಖಂಡಕಿ ಗುರುದೇವ ಆಶ್ರಮದ ಶ್ರೀ ಶಿವಯೋಗೀಶ್ವರ ಮಹಾ ಸ್ವಾಮೀಜಿಯವರ ಅವರು ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಲಕ್ಷಕ್ಕೆ ಒಬ್ಬ ಭಕ್ತ. ಕೋಟಿಗೊಬ್ಬ ಶರಣ. ಪ್ರಪಂಚದಲ್ಲಿ ಸ್ವಾಮಿ ವಿವೇಕಾನಂದ ಹಾಗೆಯೇ ಪರಮ ಪೂಜ್ಯ ಸಿದ್ದೇಶ್ವರ ಮಹಾಸ್ವಾಮಿಜಿಯವರು ಅದರಂತೆ ಶಿಕ್ಷಣ, ಸಾಹಿತ್ಯ, ಪತ್ರಿಕೋದ್ಯಮ, ಸಾಮಾಜಿಕ ಕೆರೆ ನಿರ್ಮಾಣ ಮಾಡುವುದು, ಮಹಿಳೆಯರಿಗಾಗಿ ಪ್ರಥಮ ಶಾಲೆಯ ಶಿಕ್ಷಣ ಪ್ರಾರಂಭಿಸಿರುವುದು, 12ನೇ ಶತಮಾನದಲ್ಲಿ ವಚನಗಳು ಗುಡಿಯಲ್ಲಿ ದೇವರ ಜಗಲಿಯ ಮಧ್ಯದಲ್ಲಿ ವಿವಿಧ ಮಠದಲ್ಲಿ ಅಲ್ಲಲ್ಲಿ ಇದ್ದಿದ್ದನ್ನು ಸಂಗ್ರಹಿಸಿ ಸಂರಕ್ಷಣ ಮಾಡಿರುವುದು ಸಣ್ಣ ಕೆಲಸವಲ್ಲ. ಉಸಿರಿರುವವರೆಗೆ ವಚನಗಳ ಚಿಂತನೆಯನ್ನು ಮಾಡಿರುವ ಕಾಯಕಯೋಗಿ ಡಾ. ಫÀ.ಗು. ಹಳಕಟ್ಟಿ ಅವರನ್ನು ಸ್ಮರಿಸುವುದು ಸೂಕ್ತ ಎಂದು ಆಶೀರ್ವಚನ ನೀಡಿದರು.
ಡಾ. ಫ.ಗು. ಹಳಕಟ್ಟಿ ಅವರ ಬದುಕು ಮತ್ತು ಬರಹ ವಿಷಯದ ಬಗ್ಗೆ ಶರಣ ಮೋಹನ ಕಟ್ಟಿಮನಿ ಉಪನ್ಯಾಸ ನೀಡಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ವಿ.ಸಿ. ನಾಗಠಾಣ, ಸಹಕಾರಿ ಸಂಘಗಳ ಉಪನಿಬಂಧಕಿ ಎಸ್.ಕೆ. ಭಾಗ್ಯಶ್ರೀ ಅವರು ಮಾತನಾಡಿದರು.
ಬ್ಯಾಂಕಿನ ಉಪಾಧ್ಯಕ್ಷೆ ಸೌಭಾಗ್ಯ ಭೋಗಶೆಟ್ಟಿ ಸ್ವಾಗತಿಸಿದರು. ಬಿ.ಕೆ. ಪಾಟೀಲ ನಿರೂಪಿಸಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚಾಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಸರ್ವ ಸದಸ್ಯರು. ಗಣ್ಯ, ವ್ಯಾಪಾರಸ್ಥರು, ಸಾಹಿತಿಗಳು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು. ಹಳಕಟ್ಟಿ ಅವರ ಅಭಿಮಾನಿಗಳು. ಬ್ಯಾಂಕಿನ ಸಿಬ್ಬಂದಿಗಳು ಭಾಗವಹಿಸಿದ್ದರು.