ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ಡಾ. ಫ.ಗು.ಹಳಕಟ್ಟಿ ರವರ ಜಯಂತಿ ಆಚರಣೆ
ತಾಳಿಕೋಟೆ:ಜು.4: ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪೌಢಶಾಲೆಯಲ್ಲಿ ಡಾ|| ಫ.ಗು.ಹಳಕಟ್ಟಿ ರವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರರವರು ಡಾ|| ಫ.ಗು.ಹಳಕಟ್ಟಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಸಂತೋಷ ಪವಾರ, ಶಿಕ್ಷಕರಾದ ರಾಜು ಜವಳಗೇರಿ, ಬಸವರಾಜ ಚಳ್ಳಗಿ, ಶಾಂತಗೌಡ ಬಿರಾದಾರ, ವಿಜಯಕುಮಾರ ಹಳಿಯಾಳ, ಬಸವರಾಜ ಮನಗೂಳಿ, ರೂಪಾ ಪಾಟೀಲ, ಶಿವಲೀಲಾ ಚುಂಚುರ, ಲಕ್ಷ್ಮೀ ಚುಂಚುರ, ಜ್ಯೋತಿ ನಾಯ್ಕ, ಅಂಬುಜಾ ಹಜೇರಿ, ಭೀಮನಗೌಡ ಸಾಸನೂರ, ಬಸವರಾಜ ತಳವಾರ, ರಸೂಲಸಾ ತುರಕಣಗೇರಿ, ರಮೇಶ ಪಾಸೋಡಿ, ಪುಷ್ಪಾ ನಾಡಗೌಡ, ಹೇಮಾ ಕೊಡೆಕಲ್ಲ, ಅನಿತಾ ಕೋಳೂರ, ನಾಗರತ್ನ ಮೈಲೇಶ್ವರ, ಮುಬಿನ ಮುರಾಳ, ಕಲ್ಪನಾ ಹಜೇರಿ, ದೇವಿಂದ್ರ ಗುಳೇದ, ರಾಣಿ, ಕಲ್ಪನಾ ಹಜೇರಿ, ಅನೀತಾ ಚೌದ್ರಿ, ಪಲ್ಲವಿ ಕಸ್ತುರಿ, ಪುಷ್ಪಾ ನಾಡಗೌಡ, ಶರಣಗೌಡ ಕಾಚಾಪೂರ, ವಿಷ್ಣು ಪುಜಾರಿ ಮೊದಲಾದವರು ಉಪಸ್ಥಿತರಿದ್ದರು.