ಸ್ಪಂದನಾ ನಡಗೇರಿಗೆ ಸನ್ಮಾನ
ಕಲಬುರಗಿ:ಜು.4: ಪತ್ರಕರ್ತರ ಮಕ್ಕಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು, ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ದ ವತಿಯಿಂದ ಹಾವೇರಿ ಜಿಲ್ಲೆಯಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಲಬುರಗಿ ಜಿಲ್ಲೆಯ ಕು. ಸ್ಪಂದನಾ ಎಸ್. ನಡಗೇರಿ ಪಿ.ಯು.ಸಿ ಯಲ್ಲಿ 93 ಪ್ರತಿಶತ ಅಂಕ ಪಡೆದು ತೇರ್ಗಡೆಯಾಗಿರುವುದರಿಂದ ಸನ್ಮಾನಿಸಲಾಯಿತು.
ಕಾರ್ಯ ಕ್ರಮವನ್ನು ಸಚಿವ ಶಿವಾನಂದ ಪಾಟೀಲ್ ಉದ್ಘಾಟಿಸಿದರು. ಮಸಜಿ ಸಿಎಂ ಬಸವರಾ ಜ ಬೊಮ್ಮಾಯಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾ ನಂದ ತಗಡೂರು, ಸಲೀಂ ಅಹ್ಮದ್, ರುದ್ರಪ್ಪ ಲಮಾಣಿ ಸೇರಿದಂತೆ ಹಲವರು ಭಾಗವಸಿದ್ದರು.