ಹಳಕಟ್ಟಿ ನಾಡು ಕಂಡ ಅಪರೂಪದ ವ್ಯಕ್ತಿ
ಭಾಲ್ಕಿ:ಜು.4: ವಚನ ಸಾಹಿತ್ಯ ಸಂಗ್ರಹಿಸಿ, ಪ್ರಕಟಿಸುವುದರ ಜತೆಗೆ ಆ ಸಾಹಿತ್ಯವನ್ನು ಜನಮಾನಸಕ್ಕೆ ಪ್ರಚಾರ ಪಡಿಸಿದ ವಚನ ಪಿತಾಮಹ ಫ.ಗು.ಹಳಕಟ್ಟಿಯವರು ಕನ್ನಡ ನಾಡು ಕಂಡ ಅಪರೂಪದ ವ್ಯಕ್ತಿ ಎಂದು ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಹೇಳಿದರು. ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಮಂಗಳವಾರ ಆಯೋಜಿಸಿದ್ದ ಫ.ಗು.ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಳಕಟ್ಟಿ ಅವರು ವೃತ್ತಿಯಿಂದ ವಕೀಲರಾಗಿ ಶಿಕ್ಷಣ, ಸಹಕಾರ, ಕೃಷಿ, ವಚನ ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಪಣ ತೊಟ್ಟಿದರು. ಅವರ ಆದರ್ಶ ನಮ್ಮೆಲ್ಲರಿಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.
ರಾಜ್ಯ ಮಟ್ಟದಕ ವಚನ ಕಂಠಪಾಠ ವಿಜೇತ ಕುಮಾರ ಶಿವರಾಜ ಪಾಟೀಲ್ ಅವರು ಫ.ಗು.ಹಳಕಟ್ಟಿ ಜೀವನ-ಸಾಧನೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.