ರಕ್ತದಾನ ಶಿಬಿರ
ಅಫಜಲಪುರ:ಜು.4: ಶ್ರೀ ಗುರು ಮಳೇಂದ್ರ ಶಿವಾಚಾರ್ಯರ ಸಂಸ್ಥಾನ ಹಿರೇಮಠದ ಲಿಂ. ಶಾಂತವೀರ ಮಳೇಂದ್ರ ಶಿವಾಚಾರ್ಯರ 16ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರದ ಉದ್ಘಾಟನೆ ಸಮಾರಂಭವು ಪೂಜ್ಯ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ತಹಸೀಲ್ದಾರ ಸಂಜೀವಕುಮಾರ ದಾಸರ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಜಿ.ಪಂ ಮಾಜಿ ಸದಸ್ಯ ಸಿದ್ದಯ್ಯಸ್ವಾಮಿ ಕರಜಗಿ, ಶೈಲೇಶ ಗುಣಾರಿ, ಚಂದು ನಿಂಬಾಳ, ಚಿದಾನಂದ ಮಠ ಸೇರಿದಂತೆ ಬಸಯ್ಯ ನಂದಿಕೋಲ, ಮಲ್ಲು ಭೂತಿ ಅನೇಕರು ಉಪಸ್ಥಿತರಿದ್ದರು.
ಪುಣ್ಯ ಸ್ಮರಣೋತ್ಸವದ ಅಂಗವಾಗಿ ಭಕ್ತಾದಿಗಳು ಗುರು ಶಾಂತವೀರ ಮಳೇಂದ್ರ ಶಿವಾಚಾರ್ಯರ ಕರ್ತೃ ಗದ್ದುಗೆಯ ದರ್ಶನ ಪಡೆದರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಸಕಲ ಸದ್ಭಾಕ್ತದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು. ಕಲಬುರಗಿಯ ಸುರಕ್ಷಾ ಬ್ಲಡ್ ಬ್ಯಾಂಕಿನ ಆರೋಗ್ಯ ಸಿಬ್ಬಂದಿಗಳು ರಕ್ತದಾನದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.