ವಚನ ಗಾಯನಗಳ ರಂಜಿಸಿದ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆ
ಆಳಂದ: ಜು.4:ತಾಲೂಕಿನ ಕಣ್ಮಸ್ ಗ್ರಾಮದ ಮಲೇಶಾಂತೇಶ್ವರ ಮಠದಲ್ಲಿ ಯಲ್ಲಾಲಿಂಗ ಜಾನಪದ ಕಲಾಸಂಸ್ಥೆ ನಸಿರವಾಡಿ, ಆಯೋಜಿಸಿದ್ದ ವಚನ ಗಾಯನ ಕಾರ್ಯಕ್ರಮವು ಜನಮನ ರಂಜಿಸಿತು.
ಆರಂಭದಲ್ಲಿ ಗ್ರಾಮದ ಮುಖಂಡ ಶರಣಯ್ಯ ಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರ ವಚನ ಗಾಯನಗಳನ್ನು ಕಲಾವಿದರ ಮದುರಕಂಠದಿಂದ ಹಾಡಿಸುವ ಮೂಲಕ ವಚನ ಸಾಹಿತ್ಯದ ಮಹತ್ವವನ್ನು ಜನತೆಯೊಂದಿಗೆ ಹಂಚಿಕೊಳ್ಳುವುದು ಮತ್ತು ಶರಣರ ಆದರ್ಶಗಳನ್ನು ಜಗತ್ತಿಗೆ ಪರಿಚಯಿಸುವುದು. ವಚನಗಳ ತಾತ್ಪರ್ಯವನ್ನು ವಿವರಿಸುತ್ತಾ, ಸಮಾಜದ ಒಗ್ಗಟ್ಟಿನ ಮಹತ್ವವನ್ನು ಜನರಿಗೆ ಅರ್ಥಮಾಡಿಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಗಂಗಾಧರ ಮಠಪತಿ ಅವರು ಮಾತನಾಡಿ, ವಚನಗಳ ಸಾಂಸ್ಕøತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜನರ ಹೃದಯಗಳಲ್ಲಿ ದೀಪಿಸುವ ಈ ಕಾರ್ಯಕ್ರಮವು ಕಣ್ಣಮುμï ಗ್ರಾಮದಲ್ಲಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆಯ ಆಯೋಜಿತ ಕಾರ್ಯಕ್ರಮದಿಂದ ವಿಶಿಷ್ಟ ಮತ್ತು ಸ್ಮರಣೀಯ ಕ್ಷಣಗಳನ್ನು ಉಂಟುಮಾಡಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸೋಮಯ್ಯ ಮಠಪತಿ, ವಿವೇಕಾನಂದ ಸ್ವಾಮಿ, ಸಿದ್ಧಪ್ಪ ಗಿಲಕಿ, ರಾಚಯ್ಯ ಪೂಜಾರಿ, ಅಭಿಮನ್ಯು ಖೇಮಣಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಗೀತ ಕಲಾವಿದೆ ಮಹಾದೇವಿ ಮಠಪತಿ (ಹಾರವೇನಿಯಂ), ಧೂಳಯ್ಯ ಪೂಜಾರಿ (ತಬಲಾ ವಾದಕರು), ನಾಗಣ್ಣಾ ಸುತಾರ, ಬಾಬುರಾವ ಪಾಟೀಲ ಲಕ್ಷ್ಮೀಕಾಂತ ಸುತಾರ, ಶರಣಪ್ಪ ಪೂಜಾರಿ ಶಿವಣ್ಣ ಬಿರಾದಾರ ವಿವಿಧ ಶರಣ ವಚನ ಗಾಯನಗಳು ಹಾಡಿ ಜನಮನ ರಂಜಿಸಿದರು.
ಈ ಸಂದರ್ಭದಲ್ಲಿ ಯಲ್ಲಾಲಿಂಗ ಜಾನಪದ ಕಲಾ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.