ಕಲಾವಿದ ರೆಹಮಾನ್ ಪಟೇಲ್ ಅವರಿಗೆ ಹರಿದಾಸ ರತ್ನ ಪ್ರಶಸ್ತಿ
ಕಲಬುರಗಿ:ಜು.4: ಕಲಬುರಗಿ ದಕ್ಷಿಣ ವಲಯ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರತಿಷ್ಠಿತ “ಹರಿದಾಸ ರತ್ನ ಪ್ರಶಸ್ತಿ”ಗೆ ಕಲಬುರಗಿ ಮೂಲದ ಕಲಾವಿದ ಮತ್ತು ಸಂಶೋಧಕ ರೆಹಮಾನ್ ಪಟೇಲ್ ಅವರನ್ನು ಆಯ್ಕೆ ಮಾಡಲಾಗಿದೆ.ಜುಲೈ 7ರಂದು ಕಲಬುರಗಿ ನಗರದ ಸಂಗಮೇಶ್ವರ ಸಭಾಗ್ರಹದಲ್ಲಿ ನಡೆಯುವ 2ನೇ ದಾಸ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪಟೇಲ್ ಅವರು ಲಲಿತಕಲೆ ಮತ್ತು ಸಂಶೋಧನಾ ಕಾರ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಲಯಾಧ್ಯಕ್ಷ ಶ್ಯಾಂಸುಂದರ್ ಕುಲಕರ್ಣಿ ತಿಳಿಸಿದ್ದಾರೆ.ಪಟೇಲ್ ಅವರ ಸಾಮಾಜಿಕ-ಸಾಂಸ್ಕøತಿಕ ವರ್ಣಚಿತ್ರಗಳು ಮತ್ತು ಬಹಮನಿ ಕಲೆ ಮತ್ತು ವಾಸ್ತುಶಿಲ್ಪದ ಸಂಶೋಧನಾ ಲೇಖನಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ.
ಕೆಕೆಆರ್‍ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯ್ ಸಿಂಗ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಕ.ಸಾ.ಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.