ಉಚಿತ ಆರೋಗ್ಯ ಶಿಬಿರ
ಮುನವಳ್ಳಿ,ಜು.4: ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ಜಯಪ್ರಿಯಾ ಮಡಿಕಲ್ ಫೌಂಡೇಷನ್ ಹಾಗೂ ಜೈಂಟ್ಸ್ ಗ್ರುಪ್ ರಾಣಿ ಚೆನ್ನಮ್ಮ ಸಹೇಲಿ ಇವರ ಸಂಯುಕ್ತಾಶ್ರಯದಲ್ಲಿ ವೈದ್ಯರ ಹಾಗೂ ಪತ್ರಿಕಾ ದಿನಾಚರಣೆಯ ಅಂಗವಾಗಿ ಉಚಿತ ಆರೋಗ್ಯ ಹಾಗೂ ಕಣ್ಣಿನ, ಬಿಪಿ, ಮಧುಮೇಹ ತಪಾಸಣೆ ಶಿಬಿರ ಜರುಗಿತು.
ಅಧ್ಯಕ್ಷತೆ ವಹಿಸಿ ಉಮೇಶ ಬಾಳಿ ಮಾತನಾಡಿ ಆರೋಗ್ಯ ಭಾಗ್ಯ ಎಲ್ಲವುಗಳಿಗಿಂತ ಶ್ರೇಷ್ಠ, ಆರೋಗ್ಯವಿಲ್ಲದಿದ್ದರೆ ಜೀವನವೇ ವ್ಯರ್ಥ, ಪ್ರತಿಯೊಬ್ಬರು ಕಣ್ಣು ಹಾಗೂ ಕಿವಿ ಬಗ್ಗೆ ಕಾಳಜಿ ವಹಿಸಿ ಇವು ಎರಡು ಇರದಿದ್ದರೆ ಜಗತ್ತೇ ಶೂನ್ಯವಾಗುತ್ತದೆ ಇವುಗಳನ್ನು ಕಾಪಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಗಂಜಿ, ಎ.ಪಿ.ಲಂಬೂನವರ ಹಾಗೂ ಆರೋಗ್ಯ ಶೀಬಿರಿದ ಮುಖ್ಯಸ್ಥೆ ಪ್ರೀತಿ ನವಲೂರ ಮಾತನಾಡಿದರು.
ಜೈಂಟ್ಸ್ ಗ್ರುಫ್ ಸಹೇಲಿ ಅಧ್ಯಕ್ಷೆ ರಾಧಾ ಕುಲಕರ್ಣಿ ಮಾತನಾಡಿ ಬಡಜನರ ಆರೋಗ್ಯ ಕಾಪಾಡುವ ದೃಷ್ಠಿಯಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ ಇದರ ಸದುಪಯೋಗವನ್ನು ಬಡವರು ಪಡೆದುಕೊಂಡು ಆರೋಗ್ಯದಿಂದ ಇರಲು ತಿಳಿಸಿದರು.
ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶೀಗಳು ಶಿಬರವನ್ನು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ|| ಎಸ್.ಎಲ್.ದಂಡಗಿ, ರಾಜೇಶ್ವರಿ ಬಾಳಿ, ಪದ್ಮಾವತಿ ಪಾಟೀಲ, ಸವಿತಾ ಹಂಜಿ, ಜ್ಯೋತಿ ಯಲಬುರ್ಗಿ, ಸುರೇಖಾ ಗೋಪಶೆಟ್ಟಿ, ಶಿವಲೀಲಾ ಬಾಳಿ, ಮಧುಮತಿ ಕಲಾಲ, ಸುಮಾ ರೇಣಕೆ, ಲಕ್ಷ್ಮೀ ಪಟ್ಟಣಶೆಟ್ಟಿ, ರೇಖಾ ಬಾಳಿ, ಸಂಗಮ್ಮ ಮುಗಳಿ, ಅಶೋಕ ಪಟ್ಟಣಶೆಟ್ಟಿ, ಸಂಜು ತುಳಜನ್ನವರ, ಟಿ.ಎನ್.ಮುರಂಕರ, ಶಿವಪುತ್ರೆಪ್ಪ ಕೆಳಗಡೆ, ವೈಧ್ಯಾಧಿಕಾರಿಗಳು, ಜೈಂಟ್ಸ್ ಗ್ರೂಪ್ ಹಾಗೂ ರಾಣಿ ಚನ್ನಮ್ಮ ಸಹೆಲ ಗ್ರೂಫ್ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.
ಬಾಳು ಹೊಸಮನಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ವಿರಣ್ಣ ಕೊಳಕಿ ವಂದಿಸಿದರು.