ಸ್ವ ಉದ್ಯೋಗ  ಪ್ರೇರಣಾ ಶಿಬಿರ
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.04: ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ(ಬಿ.ಸಿ) ಟ್ರಸ್ಟ್ ಹಾಗೂ ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ನಡೆಯಿತು.
ತರಬೇತುದಾರ ಜಡೆಪ್ಪ.ಜಿ ಮಾತನಾಡಿ, ಒಕ್ಕೂಟದಲ್ಲಿರುವ ಮಹಿಳೆಯರಿಗಾಗಿ ಕುರಿ ಮತ್ತು ಆಡು ಸಾಕಾಣಿಕೆ, ಅಣಬೆ ಕೃಷಿ, ಕೋಳಿ ಸಾಕಾಣಿಕೆ, ಊದುಬತ್ತಿ, ಬ್ಯೂಟಿಪಾರ್ಲರ್, ಮೇಣದ ಬತ್ತಿ ತಯಾರಿಕೆ. ವಸ್ತ್ರ ವಿನ್ಯಾಸ ಮತ್ತು ಸಿದ್ದ ಉಡುಪುಗಳ ತಯಾರಿಕೆ ತರಬೇತಿಯ ಬಗ್ಗೆ ಬಳ್ಳಾರಿಯ ಹೊಸಪೇಟೆ ರಸ್ತೆಯಲ್ಲಿರುವ ಡಿ.ಐ.ಸಿ ಕಾಂಪೌಂಡ್‌ನಲ್ಲಿರುವ ಕಚೇರಿಯಲ್ಲಿ ತರಬೇತಿ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆನೀಡಿದರು. 
ಎಸ್.ಕೆ.ಡಿ.ಆರ್. ಯೋಜನೆಯ ಮೇಲ್ವಿಚಾರಕಿ ರೂಪಾ, ಒಕ್ಕೂಟದ ಅಧ್ಯಕ್ಷೆ ಶಾಬೇರಾ, ಮುಖಂಡರಾದ ದಾದಾ ಖಲಂದರ್, ಸಲೀಂ, ಶಫಿ,  ಸೇವಾ ಪ್ರತಿನಿಧಿಗಳಾದ  ಶಾಕೀರಾ, ಭವಾನಿ, ಹಾಗೂ ಮಹಿಳೆಯರು ಇದ್ದರು.