ಬೀಳ್ಕಡುಗೆ ಕಾರ್ಯಕ್ರಮ
ನವಲಗುಂದ,ಜು.4: ಶಿಕ್ಷಕರು ನಿವೃತ್ತಿಯ ನಂತರ ತಮ್ಮ ಜೊತೆಗೆ ಮಕ್ಕಳ ಪ್ರೀತಿ, ಊರಿನ ಜನರ ಅಭಿಮಾನ ಸಹ ಶಿಕ್ಷರೊಂದಿಗಿನ ಒಡನಾಟದ ನೆನಪುಗಳನ್ನು ಹೊತ್ತೋಯ್ಯುತ್ತಾರೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಲಿಂಗಯ್ಯ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ಗೊಬ್ಬರಗುಂಪಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ.ಆರ್ ಗಾಣಿಗೇರ ಗುರುಗಳ ವಯೋಸಹಜ ನಿವೃತ್ತಿ ಅಂಗವಾಗಿ ಹಮ್ಮಿಕೊಂಡ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಶಿಕ್ಷಕರ ಹೃದಯ ತಾಯಿಯ ಹೃದಯ ಇದ್ದ ಹಾಗೆ, ಮನೆಯಲ್ಲಿದ್ದಾಗ ಸಿಗುವಂತಹ ತಾಯಿಯ ಪ್ರೀತಿ ಶಾಲೆಗೆ ಬಂದರೇ ಗುರುಗಳ ಹತ್ತಿರ ಸಿಗುತ್ತೆ, ಎರಡು ದಶಕಗಳಕ್ಕಿಂತ ಹೆಚ್ಚು ಕಾಲ ಶಿಕ್ಷಕ ವೃತ್ತಿ ನಿರ್ವಹಿಸಿ ನಿವೃತ್ತಿ ಹೊಂದಿದ ಗಾಣಿಗೇರ ಗುರುಗಳು ನೂರಕಾಲ ಸುಖವಾಗಿ ಬಾಳಿ ಬದುಕಲಿ ಎಂದು ಹಾರೈಸಿದರು.
ಸಿ.ಆರ್.ಪಿ ಶ್ರೀನಿವಾಸ್ ಅಮಾತ್ಯನವರ ಮಾತನಾಡಿ ಶಿಕ್ಷಕ ವೃತ್ತಿ ಬಹಳ ಪವಿತ್ರ ವೃತ್ತಿಯಾಗಿದೆ, ಅಂತಹ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ನಿವೃತ್ತಿ ಹೊಂದುತ್ತಿರುವಂತಹ ಗಾಣಿಗೇರ ಶಿಕ್ಷಕರ ನಿವೃತ್ತಿಯ ಬದುಕು ಸುಂದರವಾಗಲಿ, ಅವರು ಒಳ್ಳೆಯ ಆಯುರಾರೋಗ್ಯ ಹೊಂದಲಿ, ಅವರ ಗರಡಿಯಲ್ಲಿ ಕಲಿತ ಮಕ್ಕಳು ಉನ್ನತ ಸಾಧನೆಯನ್ನು ಮಾಡಿ ತಾವು ಶಾಲೆಯ ಕೀರ್ತಿ ಬೆಳಗಲಿ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎ. ಆರ್ ಗಾಣಿಗೇರ, ಸಮಾಜ ಸೇವಕ ಮಾಬುಸಾಬ ಯರಗುಪ್ಪಿ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನ ಮಾಡಿದರು, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸಂಗೀತಾ ಓಲೇಕಾರ, ಸದಸ್ಯರಾದ ಬಾಪುಗೌಡ ಕುಲಕರ್ಣಿ, ರಮೇಶ ಪೂಜಾರ, ನಾಗಪ್ಪ ಮೊಗದ, ಈಶ್ವರ್ ಸಾಲಿ, ಮಲ್ಲಿಕಾರ್ಜುನಸ್ವಾಮಿ ಮಠಪತಿ, ಆಜಾದ ನಾಶಿಪುಡಿ, ಮುಖ್ಯ ಶಿಕ್ಷಕಿ ಪ್ರೇಮಾ ರಾಮಾಪುರ, ಸಹ ಶಿಕ್ಷಕಿಯರಾದ ಎ.ಆರ್.ಕುಲಕರ್ಣಿ, ಎಸ್.ಎಚ್ ಹಿರೇಮಠ, ಬಿ.ಎಸ್. ಹೊಕ್ರಾಣಿ, ಅತಿಥಿ ಶಿಕ್ಷಕಿಯರಾದ ಸಿಂದು ಕಾಡದೇವರಮಠ, ಸುಮಾ ರಾಮನಗೌಡ್ರ ಉಪಸ್ಥಿತರಿದ್ದರು.