ರಸ್ತೆ ದುರಸ್ತಿಗೆ ಮನವಿ
ಮುನವಳ್ಳಿ,ಜು.4: ಉಸ್ತುವಾರಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿಯವರಿಗೆ ಗೊಂದಿ, ಕಲ್ಲೊಳ್ಳಿ ಗ್ರಾಮದ ಗ್ರಾಮಸ್ಥರು ಮುನವಳ್ಳಿ ಬೈಲಹೊಂಗಲ ಮುಖ್ಯರಸ್ತೆಯಿಂದ ಹೋಗುವ ರಸ್ತೆ ಕಲ್ಲು ಗುಂಡಿಇಂದ ತುಂಬಿಕೊಂಡಿದೆ ಡಾಂಬರಿಕರಣ ಅಥವಾ ಸಿಸಿ ರಸ್ತೆ ಶಿಘ್ರವೆ ಮಾಡಿಕೊಡುವಂತೆ ಮನವಿ ಅರ್ಪಿಸಿದರು.
ಉಮೇಶ ಬಾಳಿ, ಕಲ್ಲಪ್ಪ ನಲವಡೆ, ಡಿ.ಡಿ.ಟೋಪೋಜಿ, ಚಂದ್ರು ಮುಚ್ಚಂಡಿ, ಸಂಗಪ್ಪ ಹೂಲಿ, ನಾಗರಾಜ ನೇಗಿನಾಹಳ, ಮಂಜು ಹನಸಿ, ಉಮೇಶ ದಂಡಿನ, ಆನಂದ ಖನವಿ, ಇತರರು ಉಪಸ್ಥಿತರಿದ್ದರು.