ರಕ್ತದಾನ ಶಿಬಿರ
ಬಂಕಾಪುರ್,ಜು.4: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರೆಡ್ ಕ್ರಾಸ್ ಸಂಸ್ಥೆ, ಎನ್‍ಎಸ್‍ಎಸ್ ಘಟಕ ಮತ್ತು ಶಿಗ್ಗಾವಿ ತಾಲೂಕು ಆಸ್ಪತ್ರೆ ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಆರ್. ಎಸ್. ಅರಳಲೇಮಠ, ಯುವ ಜನತೆ ಕನಿಷ್ಠ ವರ್ಷಕ್ಕೆ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು ಇದರಿಂದ ನಿಮ್ಮ ಆರೋಗ್ಯದ ಸುಧಾರಣೆ ಜೊತೆಗೆ ಹಲವಾರು ಪ್ರಾಣ ಉಳಿಸಬಹುದಾಗಿದೆ ಯುವಕರ ಸಮತೋಲನ ಆಹಾರ ಸೇವಿಸಬೇಕು. ರಕ್ತದಾನ ಮಾಡುವ ಯೋಗಿ ಆಗಬೇಕು ಎಂದರು. ಶಿಬಿರದಲ್ಲಿ 50ಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ,ಬಂಕಾಪುರ್ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಯಾದ ಮನೋಜ್ ನಾಯಕ್, ಪ್ರಾಚಾರ್ಯರು ಡಾ.ರಮೇಶ್ ತೆವರಿ ಮಾತನಾಡಿದರು. ಬಸವರಾಜ್ ನಾರಾಯಣಪುರ, ಮಂಜು ಕೂಲಿ, ಯುವ ರೆಡ್ ಕ್ರಾಸ್ ಸಂಚಾಲಕ ಮಂಜುನಾಥ್ ನಾಯಕ್, ನಿಂಗಪ್ಪ ಕಲಕೋಟಿ, ವಿಜಯ್ ಕುಮಾರ್ ಗುಡಗೇರಿ, ಕೃಷ್ಣ ಕುಲಕರ್ಣಿ, ಉಮೇಶ್ ಕರ್ಜಗಿ, ಮಹೇಶ್ ಡಮನಾಳ, ಮುಂತಾದವರು ಉಪಸ್ಥಿತರಿದ್ದರು.