ಪೋಲಿಸ್ ಠಾಣೆಯಲ್ಲಿ ಪರಿಸರ ಪ್ರೇಮ ರಾಜ್ಯಕ್ಕೆ ಮಾದರಿಯಾಗಲಿ- ಟಿ.ಎಂ. ಶಿವಕುಮಾರ
ಸಂಜೆವಾಣಿ ವಾರ್ತೆ
ಸಂಡೂರು:ಜು:4: ಸಂಡೂರು ತಾಲೂಕಿನಲ್ಲಿ ಚೋರನೂರು ಗ್ರಾಮದಲ್ಲಿ ಪೋಲಿಸ್ ಠಾಣೆಯಲ್ಲಿ ಸಸಿನೆಡುವ ಕಾರ್ಯಕ್ರಮವನ್ನು ಆಚರಿಸಲಾಯಿತು. ಹಿರಿಯ ವಕೀಲರ ಟಿ.ಎಂ. ಶಿವಕುಮಾರ ಕಾರ್ಯಕ್ರಮ ಉದ್ಘಾಟಿಸಿ ಇಂತಹ ಪರಿಸರ ಪ್ರೇಮಿಯ ಪೊಲೀಸ್ ಠಾಣೆಯನ್ನು ನೋಡುತ್ತಿರುವುದು ಹೆಮ್ಮೆಯ ವಿಷಯ ಇದು ರಾಜ್ಯಕ್ಕೆ ಮಾದರಿಯಾಗಿ, ಮಾದರಿ ಪೊಲೀಸ್ ಠಾಣೆಯಾಗಲಿ ಎಂದು ತಮ್ಮ ಮನದಾಳದ ಮಾತುಗಳನ್ನಾಡಿದರು.
ಠಾಣೆಯ ಪಿ.ಎಸ್.ಐ. ರೇವಣಸಿದ್ದಯ್ಯ ಅವರನ್ನು ವಾಸವಿ ಸಂಘದ ವತಿಯಿಂದ ಸಾಧಕರಿಗೆ ಸನ್ಮಾನದ ಅಡಿಯಲ್ಲಿ ಅವರನ್ನು ಸನ್ಮಾನಿಸಿದರು, ಸನ್ಮಾನ ಸ್ವೀಕರಿಸಿ ಪಿ.ಎಸ್.ಐ. ರೇವಣಸಿದ್ದಯ್ಯ.ಜೆ.ಎಂ. ಅವರು ಮಾತನಾಡಿ ಸುಮಾರು 50 ರಿಂದ 100 ಸಸಿಗಳನ್ನು ಬೆಳೆಸುವ ಒಂದು ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗಿ ಇದನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಾಗಿ ಹೇಳಿದರು ಅಲ್ಲದೆ ಒಬ್ಬ ವಕೀಲರು ಸಂಘ ಸಂಸ್ಥೆಗಳೊಡನೆ ಮುನ್ನಡೆಸಿಕೊಂಡು ಈ ಒಂದು ಐತಿಹಾಸಿಕ ಕಾರ್ಯಕ್ರಮವನ್ನು ನಿರ್ಮಾಣ ಮಾಡುತ್ತಾ ಒಂದು ಹತ್ತು ವರ್ಷಗಳಲ್ಲಿ 13,500 ಸಸಿಗಳನ್ನು ಮತ್ತು ಬೀಜದ ಉಂಡೆಗಳನ್ನು ಪರಿಸರಕ್ಕೆ ಸಮರ್ಪಿಸಿರುವ ಕಾರ್ಯಕ್ಕೆ ಧನ್ಯವಾದ ಎಲ್ಲರ ಸಹಕಾರ, ಪೊಲೀಸ್ ಠಾಣಾಧಿಕಾರಿ ಸಿಬ್ಬಂದಿ ವರ್ಗಕ್ಕೂ ಹಾಗೂ ಸಾರ್ವಜನಿಕರಿಗೂ ಪೊಲೀಸ್ ಇಲಾಖೆಯವರಿಗೂ ಸರ್ವರೂ ಕೈಜೋಡಿಸುವ ಮೂಲಕ ಪರಿಸರ ಉಳಿಸಿ ಹಸಿರು ಬೆಳೆಸಿ ಎಂದರು.
ಪರಿಸರ ಜೀವಿಗಳ ಅವಿಭಾಜ್ಯ ಅಂಗವಾಗಿದೆ ಅದನ್ನು ಕಡ್ಡಾಯವಾಗಿ ರಕ್ಷಿಸಿಸಬೇಕು ಇಲ್ಲವಾದಲ್ಲಿ ಜೀವ ಸಂಕುಲದ ಅವನತಿ ಹೊಂದುತ್ತದೆ, ಈಗಾಗಲೇ ದೆಹಲಿಯಂತಹ ಪ್ರದೇಶದಲ್ಲಿ ಉಂಟಾಗಿರುವ ಸಮಸ್ಯೆಯೇ ಉದಾಹರಣೆಯಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಅರಳಿಮಲ್ಲಪ್ಪ ತಿಳಿಸಿದರು.
ಅವರು ತಾಲೂಕಿನ ಚೋರನೂರು ಗ್ರಾಮದಲ್ಲಿ ಪೊಲೀಸ್ ಠಾಣೆಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆರ್ಯವೈಶ್ಯ ಸಂಘ, ವಾಸವಿಫೌಂಡೇಷನ್, ವೃಂದಾಪ್ರಕಾಶನ ಸಹಯೋಗದಲ್ಲಿ ನಡೆಸಿದರು ಈ ಸಂದರ್ಭದಲ್ಲಿ ಮಾತನಾಡಿ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ತಮ್ಮನ್ನು ತಾವು ತೊಡಿಸಿಕೊಂಡು ಪರಿಸರ ಪ್ರೇಮವನ್ನು ಬೆಳೆಸುತ್ತಿರುವವರು ವಕೀಲರಾದ ಅರ್. ವಿಷ್ಣುಕುಮಾರ, ಅವರು ಸಸಿ ನೆಡುವ ಕಾರ್ಯಕ್ರಮ ಈ ಬಾರಿಯಾದರೆ, ಹಿಂದಿನ ಬಾರಿ ಬೀಜದುಂಡೆಗಳನ್ನು ವಿತರಣೆ ಹಾಗೂ ಬಿತ್ತುವಿಕೆ ನಡೆಸಿದರು, ಒಂದಲ್ಲ ಒಂದು ರೀತಿಯಲ್ಲಿ ಪರಿಸರ ರಕ್ಷಣೆ, ಉಳಿಸುವ ಬೆಳೆಸುವ ಕಾರ್ಯ ಅನುಕರಣೀಯವಾಗಿದೆ, ಇದಕ್ಕೆ ವೃಂದಪ್ರಕಾಶನ, ಅರ್ಯವೈಶ್ಯ ಸಂಘ, ವಾಸವಿ ಸಂಘ ಸಹಯೋಗದಲ್ಲಿ ಇನ್ನೂ ಹೆಚ್ಚು ನಡೆಯಲಿ ಎಂದರು.
ಅಯೋಜಕರಾದ ವಿಷ್ಣುಕುಮಾರ ಮಾತನಾಡಿ ಇಂತಹ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರ ಸಹಕಾರ ಇನ್ನು ಹೆಚ್ಚು ಇಂತಹ ಕಾರ್ಯಮಾಡುವಂತಾಗಿದೆ, ಅದ್ದರಿಂದ ಪ್ರತಿಯೊಬ್ಬರಿಗೂ ಅವಶ್ಯವಾಗಿರುವಂತಹ ಇಂತಹ ಶ್ರೇಷ್ಠಕಾರ್ಯ ಪ್ರತಿಯೊಬ್ಬರೂ ಇನ್ನು ಹೆಚ್ಚಾಗಿ ಮಾಡೋಣ ಎಂದರು.
One attachment • Scanned by Gmail