ಹಾಲು ಮತ ಸಮಾಜದವರಿಂದ ಸಂಸದರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಸಂಡೂರು:ಜೂ:4:  3 ಕೋಟಿ ವೆಚ್ಚದಲ್ಲಿ ಪಟ್ಟಣದ ದೌಲತ್‍ಪುರ ರಸ್ತೆಯಲ್ಲಿ ಬರುವ ಸ್ಥಳದಲ್ಲಿ ಕನಕಭವನವನ್ನು ನಿರ್ಮಿಸಲು ಇದೇ ಶ್ರಾವಣಮಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದಲೇ ಭೂಮಿ ಪೂಜೆ ನೆರವರಿಸೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುರುಬ ಸಂಘದ ಜಿಲ್ಲಾ ಘಟಕದ ನಿರ್ದೇಶಕರಾದ ನೀಲಕಂಠಪ್ಪ, ಕರಿಯಪ್ಪ, ತಾಲೂಕು ಅಧ್ಯಕ್ಷ ಗುರುಪಾದಪ್ಪ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಖಜಾಂಚಿ ರವಿ, ಪುರಸಭಾ ಸದಸ್ಯ ಕೆ.ವಿ. ಸುರೇಶ್, ಕೆ.ಸತ್ಯಪ್ಪ, ಶಿವರಾಂ, ತಿರುಮಲ, ಹೊಸಗೇರಪ್ಪ, ಕೊಂಡಾಪುರ ಕುಮಾರಸ್ವಾಮಿ, ಬಿ. ಹುಚ್ಚಪ್ಪ ಇತರರು ಉಪಸ್ಥಿತರಿದ್ದು ಸನ್ಮಾನಿಸಿದರು.
ಕುರುಬ ಸಮಾಜದ ಪ್ರತಿಯೊಬ್ಬರೂ ಸಹ ಒಗ್ಗಟ್ಟಿನಿಂದ ಕಾಂಗ್ರೇಸ್ ಪಕ್ಷದ ಪ್ರಗತಿಗೆ ಶ್ರಮಿಸಿದ್ದಾರೆ, ಅಲ್ಲದೆ ಶಾಸಕರಾಗಿದ್ದಾಗ ಹಾಗೂ ನೂತನ ಸಂಸದರಾಗಿ ಈ.ತುಕರಾಂ ಅವರು ಆಯ್ಕೆಯಾಗಿದ್ದು ಸಂತಸ ಹಾಗೂ ಹೆಮ್ಮೆಯಾಗಿದೆ ಎಂದು ಅಧ್ಯಕ್ಷರು ಗುರುಪಾದಪ್ಪ ತಿಳಿಸಿದರು.
ಅವರು ತಾಲೂಕಿನ ಕೃಷ್ಣಾನಗರದ ಸಂಸದರ ಕಛೇರಿಯಲ್ಲಿ ತಾಲೂಕು ಕುರುಬ ಸಮಾಜದವತಿಯಿಂದ ನೂತನ ಸಂಸದರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕೆ.ವಿ. ಸುರೇಶ ಅವರು ಮಾತನಾಡಿ ಶಾಸಕರು, ಸಂಸದರಾಗಿ ಆಯ್ಕೆಯಾಗುವ ಮೂಲಕ ಮತ್ತೋಮ್ಮೆ ತಮ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾರೆ, ಅದಕ್ಕೆ ಸಮಾಜ ಪೂರ್ಣಪ್ರಮಾಣದಲ್ಲಿ ಬೆಂಬಲಿಸಿ ಕಾರ್ಯನಿರ್ವಹಿಸಿದೆ, ಅದ್ದರಿಂದ ಸಮಾಜದ ಬೆಳವಣಿಗೆಗೆ ಪೂರ್ಣಪ್ರಮಾಣದ ಸಹಕಾರವನ್ನು ನೀಡುವ ಮೂಲಕ ಸಮಾಜಕ್ಕೆ ಬೇಕಾದ ಸಹಕಾರವನ್ನು ನೀಡಬೇಕೆಂದು ವಿನಂತಿಸಿಕೊಂಡರು,   ಗೌರವಾಧ್ಯಕ್ಷರು ಸತ್ಯಪ್ಪ.ಕೆ. ಅವರು ಮಾತನಾಡಿ ಕಾಂಗ್ರೇಸ್ ಪಕ್ಷದಲ್ಲಿ ನಮ್ಮ ಸಮಾಜ ಬದ್ಧತೆಯನ್ನು ವ್ಯಕ್ತಪಡಿಸುವ ಮೂಲಕ ಸಮಾಜದ ಒಳಿತೆಗೆ ಮತ್ತು ಪಕ್ಷಕ್ಕೆ ನೂತನ ಸಂಸದರಾದ ಈ.ತುಕರಾಂ ಅವರು ಶ್ರಮಿಸುತ್ತಿದ್ದಾರೆ, ಅವರು ಇನ್ನೂ ಹೆಚ್ಚಿನ ಕಾರ್ಯನಿರ್ವಹಿಸಲಿ ಎಂದರು.
ಈ ಸಂದರ್ಭದಲ್ಲಿ ಕೆ.ವಿ.ಸುರೇಶ್, ನಿರ್ದೇಶಕರಾದ ನೀಲಕಂಠ, ಬಸವರಾಜಮಸೂತಿ, ಕೊಂಡಾಪುರ ಕುಮಾರಸ್ವಾಮಿ, ಉಪಾಧ್ಯಕ್ಷರುಗಳು ಪದಾಧಿಕಾರಿಗಳು, ಖಜಾಂಚಿ ರವಿಕುಮಾರ, ಇತರ ಗಣ್ಯರು ಉಪಸ್ಥಿತರಿದ್ದರು.