ಸಾಹಿತ್ಯವೆಂಬುದು ಫ.ಗು. ಹಳಕಟ್ಟಿಯವರಿಗೆ ರಕ್ತಗತ ಗುಣವಾಗಿತ್ತು
ಸಂಜೆವಾಣಿ ವಾರ್ತೆ
ಸಂಡೂರು: ಜು: 4:  ಸಾಹಿತ್ಯವೆಂಬುದು ಫ.ಗು. ಹಳಕಟ್ಟಿಯವರಿಗೆ ರಕ್ತಗತವಾಗಿ ಬಂದಿತ್ತು, ಇಡೀ ಬದುಕನ್ನು ಸಾಹಿತ್ಯದ ಪ್ರಸಾರ, ರಕ್ಷಣೆ, ಬೆಳವಣಿಗೆಗೆ ಶ್ರಮಿಸಿದವರು ಹಳಕಟ್ಟಿಯವರು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಷಡಾಕ್ಷರಯ್ಯ ತಿಳಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಫ.ಗು.ಹಳಕಟ್ಟಿಯವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇವರ ಲೇಖನಗಳು ನಾಡಿನಾದ್ಯಂತ ಪ್ರಖ್ಯಾತಿಯನ್ನು ಪಡೆದಿದ್ದವು, ಅಲ್ಲದೆ ಇಂಗ್ಲೇಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತ್ರೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ ಹಲವಾರು ಕೃತಿಗಳನ್ನು ಬರೆದರು. ಅಲೂರು ವೆಂಕಟರಾಯರ ಸಹಪಾಠಿಗಳಾಗಿದ್ದರು, ಮುಂಬಯಿ ವಿದ್ಯಾರ್ಥಿಗಳು ಮತ್ತು ಅಲ್ಲಿನ ಗುಜರಾತಿ ಮತ್ತು ಮರಾಠ ಭಾಷಾಭಿಮಾನ ಕನ್ನಡದಲ್ಲಿ ತಮ್ಮ ಭಾಷಯ ಬಗ್ಗೆ ನಿರಾಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು, ಕನ್ನಡಿಗರು ಎಚ್ಚೆಗೊಳ್ಳದಿದ್ದರೆ ಕನ್ನಡ ಭಾಷೆ ಉದ್ದಾರವಾಗದೆಂದು ಭಾವಿಸಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮನೋಭಾವನೆ ಬೆಳಸಿಕೊಂಡು ಅಲೂರು ವೆಂಕಟರಾಯರಿಗೆ ಸ್ಪೂರ್ತಿಯಾದರು.ಇವರು 1905ರಲ್ಲಿ ವಿಜಯಪುರ ನಗರಸಭೆಯ ಶಾಲಾ ಕಾರ್ಯ ನಿರ್ವಾಹಕ ಮಂಡಳಿಯ ಸಭಾಧ್ಯಕ್ಷರಾಗಿ, ಜಿಲ್ಲಾ ಗ್ರಾಮಾಂತರ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾದರು, ವಿಧಾನಪರಿಷತ್ತು ಸದಸ್ಯರಾಗಿ ಶಾಸನಬದ್ಧ ಅಧಿಕಾರದಿಂದ ಕನ್ನಡವನ್ನು ಗಟ್ಟಿಗೊಳಿಸಲು ಪುಷ್ಠಿಗೊಳಿಸಲು ಸಮೃದ್ಧವಾಗಿ ಕನ್ನಡ ಕಟ್ಟಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಅಜರಾಮರರಾಗಿ ಕೆಲಸ ಮಾಡಿದ್ದಾರೆ ಎಂದರು. ತಾಳೆಯೋಲೆಗಳನ್ನು ಸಂಗ್ರಹಸಿಉವುದಕ್ಕೆ ಚರಿತ್ರೆಕಾರರು ಗುರುತಿಸಿದ್ದ 50 ವಚನಕಾರರನ್ನು ಫ.ಗು ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ 250 ವಚನಕಾರರನ್ನು ಬೆಳಕಿಗೆ ತಂದರು. 1926ರಲ್ಲಿ ಅರಂಭಿಸಿ ಶಿವಾನುಭವ ಮಾಸಿಕ ಪತ್ರಿಕೆ 35 ವರ್ಷ ನಿರಂತರವಾಗಿ ನಡೆಸಿದ ಕನ್ನಡ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. 1927ರಲ್ಲಿ ನವಕರ್ನಾಟಕ ಎನ್ನುವ ವಾರ ಪತ್ರಿಕೆಯನ್ನು ಪ್ರಾರಂಭಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದು ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.