ರಾಹುಲ್‌ ಗಾಂಧಿ ಪ್ರಬುದ್ಧರೇ ಅಲ್ಲ’
ಸಂಜೆವಾಣಿ ವಾರ್ತೆ
ಹೊಸಪೇಟೆ ಜು4:‘ಹಿಂದೂ ಚಿಂತನೆ, ಭಾರತೀಯ ಚಿಂತನೆಯಲ್ಲಿ ರಾಹುಲ್ ಬೆಳೆದವರಲ್ಲ. ಹೀಗಾಗಿ ಸಂಸತ್‌ನಲ್ಲಿ ಅವರು ನೀಡಿರುವ ಹೇಳಿಕೆ ಬಾಲಿಶದಂತೆ ಕಾಣುತ್ತಿದ. ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೆ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ’ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
‘ಜಗತ್ತಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿರುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಯುರೋಪ್‌ನಲ್ಲಿ ಇಂದು ಕಾಣಿಸುತ್ತಿರುವ ತೀವ್ರ ಬಲಪಂತೀಯ ಹೋರಾಟವೇ ಇದಕ್ಕೊಂದು ಸಾಕ್ಷಿ. ಹೀಗಿದ್ದರೂ ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ ಗಾಂಧಿ ಇಂತಹ ಹೇಳಿಕೆ ನೀಡುತ್ತಿರುವುದನ್ನು ಕಂಡಾಗ ಅವರಿನ್ನೂ ಪ್ರಬುದ್ಧರಾಗಿಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಅವರು ಬುಧವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.
ಭಾರತೀಯ ನ್ಯಾಯಸಂಹಿತೆ ಜಾರಿಗೆ ತಂದಿರುವ ಕಾರಣ ಸಾಕ್ಷ್ಯಗಳ ಪರಿಶೀಲನೆಗೆ ಯಾವುದು ಅಡ್ಡಿಯಾಗಿದ್ದವೋ ಅದನ್ನು ತೊಡದುಹಾಕುವ ಕೆಲಸ ಆಗಿದೆ. ಇಲ್ಲೂ ಕೆಲವೊಂದು ದೋಷಗಳಿದ್ದರೆ ಅದನ್ನು ತಿದ್ದುಪಡಿ ಮಾಡಿ ಸರಿಪಡಿಸುವುದು ಸಾಧ್ಯವಿದೆ ಎಂದರು.
ಕೈದಿಗಳಿಗೆ ಹಾಕಿದ ಉಡುಪನ್ನು ಮಕ್ಕಳಿಗೆ ತೊಡಿಸಿ ಸಂಭ್ರಮಿಸುವುದು ಸರಿಯಲ್ಲ. ಇದರ ಬದಲಿಗೆ ಬಂಧಿತರು ದೋಷಮುಕ್ತರಾಗಿ ಹೊರಬರಲಿ ಎಂಬ ಪ್ರಾರ್ಥನೆ ಸಲ್ಲಿಸಿದರೆ ಅದರಲ್ಲಿ ಅರ್ಥವಿದೆ ಎಂದು