ಡಿಐಟಿ ಕಾಲೇಜಿಗೆ ಟೇಬಲ್ ಟೆನ್ನಿಸ್‍ನಲ್ಲಿ ದ್ವಿತೀಯ ಸ್ಥಾನ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು4: ಇತ್ತೀಜೆಗೆ ಬಸವಕಲ್ಯಾಣದಲ್ಲಿ ನಡೆದ ವಿಟಿಯುವ ಕಲ್ಬುರ್ಗಿ ವಿಭಾಗ ಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಪಿಡಿಐಟಿ ಕಾಲೇಜು ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಜುಲೈ 1 ಮತ್ತು 2 ರಂದು ನಡೆದ ಪಂದ್ಯಾವಳಿಯಲ್ಲಿ ವಿಭಾಗದ 9 ತಂಡಗಳು ಪಾಲ್ಗೊಂಡಿದ್ದು ಪಿಡಿಐಟಿನ ವಿದ್ಯುತ್ ವಿಭಾಗದ ಕುಮಾರಿ ಚಂದನಾ, ಅಕ್ಷತಾ, ಎಐಎಂಎಲ್ ವಿಭಾಗದ ನಿಖಿತಾ ಭಾಗವಹಿಸಿ ಅದ್ಬುತ ಸಾಧನೆಯ ಮೂಲಕ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದೆ ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿಯ ಅಧ್ಯಕ್ಷರು ಸದಸ್ಯರು ಹಾಗೂ ಬೋದಕ ಭೋದಕೇತರ ಸಿಬ್ಬಂದಿ ವಿದ್ಯಾರ್ಥಿನಿಯರ ಸಾಧನೆಗೆ ಹರ್ಷಿಸಿದ್ದಾರೆ.
ವಿ.ಟಿ.ಯು ಕಲ್ಬುರ್ಗಿ ವಿಭಾಗ ಮಟ್ಟದ ಮಹಿಳೆಯರ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳು ಬಸವಕಲ್ಯಾಣದ ಬಿ.ಕೆ.ಟಿ.ಇ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ದಿನಾಂಕ ಜುಲೈ 1 ಮತ್ತು 2 ರಂದು ನಡೆದಿದ್ದು, ಈ ಪಂದ್ಯಾವಳಿಗಳಲ್ಲಿ 9 ಮಹಿಳೆಯರ ತಂಡಗಳು ಭಾಗವಹಿಸಿದ್ದು, ಹೊಸಪೇಟೆಯ ಪಿ.ಡಿ.ಐ.ಟಿ ಕಾಲೇಜಿನ ವಿದ್ಯಾರ್ಥಿನಿಯರಾದ ವಿದ್ಯುತ್ ವಿಭಾಗದ ಕು.ಚಂದನ, ಕು.ಅಕ್ಷತಾ ಹಾಗೂ ಎ.ಐ.ಎಂ.ಎಲ್ ವಿಭಾಗದ ಕು.ನಿಖಿತಾ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಮತ್ತು ಈ ವಿದ್ಯಾರ್ಥಿನಿಯರು ಮೈಸೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳಿಗೆ ಆಯ್ಕೆಯಾಗಿರುತ್ತಾರೆ ಎಂದು ತಿಳಿಸಲು ಹೆಮ್ಮೆಯ ವಿಷಯವಾಗಿದೆ. ಈ ವಿಜೇತರಿಗೆ ಪಿ.ಡಿ.ಐ.ಟಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕರಿಬಸವರಾಜ್ ಬಾದಾಮಿ, ಪ್ರಾಂಶುಪಾಲರಾದ ಡಾ.ಯು.ಎಂ.ರೋಹಿತ್, ಉಪಪ್ರಾಂಶುಪಾಲರಾದ ಪ್ರೊ. ಪಾರ್ವತಿ ಕಡ್ಲಿ, ದೈಹಿಕ ಶಿಕ್ಷಕ ನಿರ್ದೇಶಕರಾದ ಕೆ.ಎಸ್. ಮಂಜುನಾಥ್ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.