ಹನುಮಂತಪ್ಪನ ಕೈಚಳಕದಲ್ಲಿ ಮಣ್ಣೆತ್ತು
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.04: ನಾಳೆ ಆಚರಿಸವ ಮಣ್ಣೆತ್ತಿನ ಅಮವಾಸ್ಯೆಗೆ ಪೂಜೆ ಮಾಡಲು ತಾಲೂಕಿನ‌ಕುಡುತಿನಿ ಗ್ರಾಮದ ಕಲಾವಿದ ಪುಂಡಿ ಹನುಮಪ್ಪನವರ ಕೈ ಚಳಕದಲ್ಲಿ ಸಿದ್ದವಸಗಿರುವ  ಮಣ್ಣಿತ್ತುಗಳು ಇವು.
ಗ್ರಾಮದ  ಗ್ರಂಥಾಲಯದ ಅರೆಕಾಲಿಕ ಮೇಲ್ವಿಚಾರಕರಾಗಿ ಕೆಲಸ ಮಾಡುವ ಇವರು ಆಯಾ ಹಬ್ಬಗಳಿಗೆ ಅನುಗುಣವಾಗಿ ವಿವಿಧ ರೀತಿಯ ಮೂರ್ತಿಗಳನ್ನು ತಯಾರು ಮಾಡಿ ಮಾರಾಟ ಮಾಡುತ್ತಾರೆ.