ತನಿಖಾಧಿಕಾರಿ ಬದಲಾವಣೆಗೆ ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು:ಜು.04:- ಕಳೆದ ಮಾ.8ರಂದು ನಡೆದ ಮುಸ್ಲಿಂ ಸಮುದಾಯದ ಧರ್ಮಗುರು ಮೌಲಾನಾ ಅಕ್ಮಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಕೊಲೆ ಆರೋಪಿಗಳನ್ನು ತನಿಖಾ ತಂಡ ಇನ್ನೂ ಬಂಧಿಸದೇ ನಿರ್ಲಕ್ಷ್ಯ ಧೋರಣೆ ತಾಳಿದೆ. ಇದಕ್ಕಾಗಿ ಭಾರೀ ಪ್ರಮಾಣದ ಹಣದ ವಹಿವಾಟು ನಡೆದಿರುವ ಸಾಧ್ಯತೆ ಇದೆ. ಹೀಗಾಗಿ ನಗರ ಪೆÇಲೀಸ್ ಆಯುಕ್ತರು ತನಿಖಾಧಿಕಾರಿಯನ್ನು ಬದಲಿಸಬೇಕೆಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆತನನ್ನು ಬೆಂಗಳೂರಿಗೆ ಕರೆತಂದ ಕ್ಯಾಬ್ ಚಾಲಕನನ್ನು ಸಹಾ ಆರೋಪಿಯನ್ನಾಗಿಸಲಾಗಿದೆ. ಆದರೆ ಅಕ್ಮಲ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಕರೆತಂದವರು, ಆತ ಗೆಸ್ಟ್‍ಹೌಸ್‍ನಲ್ಲಿದ್ದಾಗ ಜೊತೆಯಲ್ಲಿದ್ದವರನ್ನು ಇನ್ನೂ ಬಂಧಿಸಿಲ್ಲ. ಕೆಲವರು ತಪ್ಪಿಸಿಕೊಂಡಿದ್ದಾರೆ ಎಂದು ಪೆÇಲೀಸರು ತಿಳಿಸುತ್ತಾರೆ. ಆದರೆ, ಈಗಿನ ಆಧುನಿಕ ತಂತ್ರಜ್ಞಾನದ ದಿನಗಳಲ್ಲಿ ಅವರನ್ನು ಬಂಧಿಸಲು ಇಷ್ಟು ಕಾಲ ಬೇಕೆ ಎಂದು ಪ್ರಶ್ನಿಸಿದರು.
ಪೆÇಲೀಸರು ಕೆಲ ಆರೋಪಿಗಳನ್ನು ಉದ್ದೇಶ ಪೂರ್ವಕವಾಗಿ ರಕ್ಷಿಸುತ್ತಿದ್ದಾರೆ. ಇದರ ಹಿಂದೆ ಭಾರೀ ಅವ್ಯವಹಾರ ನಡದಿದೆ. ಮೃತನ ಕುಟುಂಬದವರು ಕ್ಷುಲ್ಲಕ ಕಾರಣಕ್ಕೆ ನಡೆದ ಕೊಲೆ ಪ್ರಕರಣದಿಂದಾಗಿ ಬೀದಿಪಾಲಾಗಿದ್ದಾರೆ. ಇವರು ಸಂಬಂಧಿಸಿದ ಸಚಿವರು, ಹಿರಿಯ ಪೆÇಲೀಸ್ ಅಧಿಕಾರಿಗಳಿಗೆಲ್ಲ ಮನವಿ ಸಲ್ಲಿಸಿದ್ದಾರೆ. ಹೀಗಿದ್ದರೂ ಪೆÇಲೀಸರು ನ್ಯಾಯ ದೊರಕಿಸಿಕೊಡದಿರಲು ತನಿಖಾಧಿಕಾರಿಯ ಧೋರಣೆಯೇ ಕಾರಣ. ಹೀಗಾಗಿ ಈಗಿನವರ ಬದಲು ಬೇರೊಬ್ಬ ನಿಷ್ಠಾವಂತ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು.
ಪದಾಧಿಕಾರಿಗಳಾದ ಎಸ್.ಸ್ವಾಮಿ, ಮೊಹಮ್ಮದ್ ಅಫೀಜುಲ್ಲಾ, ರಫತ್ ಖಾನ್, ನೂರುದ್ದೀನ್ ಮೌಲಾನಾ ಹಾಜರಿದ್ದರು.