ಮಕ್ಕಳನ್ನ ಸನ್ಮಾರ್ಗದಲ್ಲಿ ಬೆಳೆಸಿದಾಗ ಸ್ವರ್ಗ, ಮೋಕ್ಷ
ಚಿಕ್ಕಬಳ್ಳಾಪುರ.ಜು.೦೪-ನಿಮ್ಮ ಬದುಕು ಸ್ವರ್ಗದಂತಿರಬೇಕಾದರೆ ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳಸಿದಾಗ ಅವರಿಂದ ಸ್ವರ್ಗ ಮತ್ತು ಮೋಕ್ಷ ದೊರೆಯುತ್ತದೆ. ಮಗುವಿಗೆ ಜನ್ಮಸ್ಥಳವೇ ಮೊದಲ ಪಾಠಶಾಲೆ,ಜನ್ಮದಾತೆ ತಾಯಿಯೇ ಮೊದಲ ಗುರು, ಶಾಲೆ ಮತ್ತು ಗುರು ಮಕ್ಕಳಿಗೆ ವಿದ್ಯೆಮತ್ತು ಬುದ್ದಿ ನೀಡುವ ಎರಡನೆ ಶಾಲೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿರವರು ತಿಳಿಸಿದರು.
ನಗರ ಹೊರವಲಯದ ಸೂಲಾಲಪ್ಪ ದಿನ್ನೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಬಿಜಿಎಸ್ ವರ್ಲ್ವ್ ಸ್ಕೂಲ್, ಬಿಜಿಎಸ್ ಆಂಗ್ಲಶಾಲೆ ಅಗಲಗುರ್ಕಿ ಮತ್ತು ಬಿಜಿಎಸ್ ಶಾಲೆ ಮಂಚನಬಲೆಯ ಶಿಕ್ಷಣ ಸಂಸ್ಥೆಗಳ ೩೦೦ ಪುಟಾಣಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಪ್ರಥಮ ಅಕ್ಷರಾಭ್ಯಾಸದ ಕಾರ್ಯಕ್ರಮ ಜ್ಞಾನಾಂಕುರ – ೨೦೨೪ರ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಮಕ್ಕಳ ಮನಸ್ಸು ತುಂಬಾ ಸೂಕ್ಮವಾಗಿರುತ್ತದೆ. ಪೋಷಕರು ಎನು ಮಾಡುತ್ತಾರೂ ಅದು ಮಕ್ಕಳ ಮನಸ್ಸಿಗೆ ನಾಟುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ಜಗಳ, ಮುನಿಸು,ಬೈಗುಳಗಳಂತಹುದನ್ನು ಮಾಡಬೇಡಿ, ಮಾಡಿದರೆ ನಿಮ್ಮ ಮಗು ನಾಳೆ ಅದನ್ನೆ ಮಾಡುತ್ತದೆ. ಹಾಗೇನಾದರೂ ಮಾಡುವುದಿದ್ದರೆ ಮಕ್ಕಳಿಲ್ಲದಾಗ ನೀವಿಬ್ಬರೆ ಇದ್ದಾಗ ಮಾಡಿಕೊಳ್ಳ ಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ಮಕ್ಕಳು ಮೊದಲ ತಪ್ಪಿಗೆ ಹೆತ್ತವರು ಶಿಕ್ಷೆ ನೀಡಿದರೆ ಮುಂದೆ ಆ ಮಕ್ಕಳು ತಪ್ಪು ಮಾಡಲು ಹೆದರುತ್ತವೆ. ಎಲ್ಲಾ ಮಕ್ಕಳಿಗೂ ಸಂಸ್ಕಾರ ಜನ್ಮದಿಂದಲೇ ಮನಸ್ಸಿನಲ್ಲೇ ಇರುತ್ತದೆ ಅದಕ್ಕೆ ಪೋಷಕರು ನೀರೆರೆದು ಬೆಳಸಿ ಪೋಷಿಸಿದಾಗ ಸಮಾಜ ಮತ್ತು ದೇಶಕ್ಕೆ ಗೌರವ ತರುತ್ತಾರೆ. ಮಕ್ಕಳ ಅಕ್ಷರಭ್ಯಾಸ ಇಲ್ಲಿ ಸಾಂಕೇತಿಕ ಮಾತ್ರ ಆದರೆ ಪೋಷಕರು ನಿಮ್ಮ ಸಂಪ್ರದಾಯ, ಸಂಸ್ಕಾರ ಆಚರಣೆಗಳನ್ನು ಕಲಿಸುವುದರೊಂದಿಗೆ ನಾಡು-ನುಡಿಗೆ, ಗುರು-ಹಿರಿಯರಿಗೆ, ಮಾತಾ-ಪಿತೃಗಳಿಗೆ ಗೌರವ ನೀಡುವುದನ್ನು ಕಲಿಸ ಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಜ್ಞಾನ ಅಂಕುರವಾಗಿ ಮುಂದೆ ಜೀವನದಲ್ಲಿ ದಾರಿ ದೀಪ ವಾಗುತ್ತದೆ. ಜ್ಞಾನ ವಿರುವಲ್ಲಿ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ಪರಿಹಾರ ಕಂಡು ಕೊಂಡು ಜೀವನ ಸಾರ್ಥಕತೆ ಹೊಂದಬಹುದು. ಜ್ಞಾನಕ್ಕೆ ಬೇಕಾದ ಅಕ್ಷರಾಭ್ಯಾಸಕ್ಕೆ ಚುಂಚಶ್ರೀಗಳಿಂದ ಪಡೆಯ್ತುಇರುವ ನೀವೆ ಧನ್ಯರು ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದು ಉಪ ವಿಭಾಗಾಧಿಕಾರಿಡಿ.ಹೆಚ್.ಅಶ್ವಿನ್ ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ಚಿಕ್ಕಬಳ್ಳಾಪುರ ವಿಭಾಗದ ಆಡಳಿತಾಧಿಕಾರಿ ಡಾ. ಎನ್.ಶಿವರಾಮ ರೆಡ್ಡಿ ಮಾತನಾಡಿದರು.
ಸಮಾರಂಭದಲ್ಲಿ ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಮಂಗಳನಾಥ ಸ್ವಾಮೀಜಿ, ಸಾಯಿ ಕೀರ್ತಿನಾಥ ಸ್ವಾಮೀಜಿ, ಭಾರತ ಸರ್ಕಾರದ ಎಡಿಸಿ ಲಕ್ಷ್ಮಣ್. ನವ ದೆಹಲಿ ಕನ್ನಡ ಸಂಘಟನೆಯ ಅಧ್ಯಕ್ಷ ನಾಗರಾಜ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ಧೇಶಕಿ ಮನೀಷ್, ಎಸ್‌ಜೆಸಿ ಇಂಜನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಜಿ.ಟಿ.ರಾಜು,,ಅಗಲಗುರ್ಕಿ ಬಿಜಿಎಸ್ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ಕುಮಾರ್,ಬಿಜಿಎಸ್ ವರ್ಲ್ವ್ ಸ್ಕೂಲ್ ಪ್ರಾಂಶುಪಾಲ ಗಿರಿಬಾಬು , ಬಿಜಿಎಸ್ ಶಾಲೆ ಮಂಚನಬಲೆಯ ಪ್ರಾಂಶುಪಾಲ ಜಿ,ವಿ,ಗಂಗಾಧರ್, ಬಿಜಿಎಸ್ ಶಾಲೆಗಳ ಶಿಕ್ಷಕರು, ಗಣ್ಯರು, ಸಿಬ್ಬಂದಿ ವರ್ಗದವರು, ಪೋಷಕರು ಹಾಗೂ ಪುಟಾಣಿ ಮಕ್ಕಳು ಇದ್ದರು.