ಶಿಕ್ಷಕರ ಸಮಸ್ಯೆ ಆಲಿಸಲು ತಹಶೀಲ್ದರ್‌ಗೆ ಮನವಿ
ಮಾಲೂರು. ಜು.೪- ಎಸ್.ಸಿ./ಎಸ್.ಟಿ. ಶಿಕ್ಷಕರ ಕುಂದು ಕೊರತೆಗಳು ಹಾಗೂ ಇಲಾಖಾ ಮಟ್ಟದಲ್ಲಿ ನಡೆಯಲಿರುವ ಸಭೆ ಮತ್ತು ರಾಷ್ಟ್ರೀಯ ಹಬ್ಬಗಳು, ಸಮ್ಮೇಳನಗಳು, ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಮಾರಂಭ ಪೂರ್ವಭಾವಿ ಸಭೆಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಎಸ್.ಸಿ./ಎಸ್.ಟಿ ಶಿಕ್ಷಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸುವಂತೆ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಜಿ ಮುನಿಯಪ್ಪ ನೇತೃತ್ವದಲ್ಲಿ ಪಟ್ಟಣದ ಬಿ ಇ ಒ ಚಂದ್ರಕಲಾ ಹಾಗೂ ಗ್ರೇಟ್ ಟು ತಹಶೀಲ್ದಾರ್ ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಲೂರು ತಾಲ್ಲೂಕು ಶಾಖೆಯ ಪದಾಧಿಕಾರಿಗಳನ್ನು ಆಹ್ವಾನಿಸಬೇಕೆಂದು ಜಿಲ್ಲಾ ಸಂಘದ ಮನವಿ ಪತ್ರದೊಂದಿಗೆ ತಾಲೂಕು ಸಮಿತಿಯು ಕರ್ನಾಟಕ ಸರ್ಕಾರದ ಸಹಕಾರ ಸಂಘಗಳ ನೋಂದಣಿ ಅಧಿನಿಯಮ (೧೯೬೦ನೆಯ ಇಸವಿ ೧ನೇ ಕ್ರಮಾಂಕದ ಕರ್ನಾಟಕದ ಅಧಿನಿಯಮ) ರಂತೆ ಮತ್ತು ರಾಜ್ಯ ಕಾರ್ಯಕಾರಿ ಸಮಿತಿ ವಾಪ ಸಮಿತಿಯ ಅನುಮೋದನೆ ಮೇರೆಗೆ ಮಾಲೂರು ತಾಲ್ಲೂಕು ಶಾಖೆಯ ಪದಾಧಿಕಾರಿಗಳನ್ನು ಜಿಲ್ಲಾ ಶಾಖೆ ಎಸ್.ಸಿ./ಎಸ್.ಟಿ. ಶಿಕ್ಷಕರ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಹಾಗೂ ಇಲಾಖಾ ಮಟ್ಟದಲ್ಲಿ ನಡೆಯಲಿರುವ ವಿವಿಧ ಸಭೆಗಳಿಗೆ ಮತ್ತು ರಾಷ್ಟ್ರೀಯ ಹಬ್ಬಗಳು, ಸಮ್ಮೇಳನಗಳು, ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮಗಳು ಮತ್ತು ಶೈಕ್ಷಣಿಕ ಸಭೆ ಸಮಾರಂಭಗಳಿಗೆ ಹಾಗೂ ಆಹ್ವಾನಿಸಿ ಸಹಕಾರ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ತಾವುಗಳು ಆಗತ್ಯ ಕ್ರಮ ಕೈಗೊಂಡು ನಮ್ಮ ಸಂಘಟನೆಗೆ ಅವಕಾಶ ಮಾಡಿಕೊಡಬೇಕೆಂದು ಮಾಲೂರು ತಾಲ್ಲೂಕು ಸಮಿತಿಯು ವಿನಂತಿ ಮಾಡುತ್ತದೆ.
೨೦೨೪-೨೫ನೇ ಸಾಲಿನಿಂದ ಮುಂದಿನ ಆದೇಶದವರೆಗೆ ಅನ್ವಯಿಸುವಂತೆ ಜಿಲ್ಲಾ ಸಮಿತಿ ಅನುಮೋದನೆ ನೀಡಿರುವ ಮಾಲೂರು ತಾಲ್ಲೂಕು ಸಂಘದ ಪದಾಧಿಕಾರಿಗಳನ್ನು ಇಲಾಖೆಯ ಎಲ್ಲಾ ಸಭೆಗಳಿಗೆ ಆಹ್ವಾನಿಸಬೇಕೆಂದು ಜಿಲ್ಲಾ ಸಂಘಟನೆಯ ಮನವಿ ಯೊಂದಿಗೆ ಮಾಲೂರು ತಾಲ್ಲೂಕು ಶಾಖೆಯು ತಹಶೀಲ್ದಾರ್ ಹಾಗೂ ಬಿಇಒ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಿರುವುದಾಗಿ ಹೇಳಿದರು
ಎಸ್ ಸಿ ಎಸ್ ಟಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಆಲಹಳ್ಳಿ ಸುರೇಶ್, ಗ್ರಾಮೀಣ ಶಿಕ್ಷಕರ ಸಂಘದ ಉಪಾಧ್ಯಕ್ಷ ಶಶಿಧರ್, ಎಸ್‌ಸಿ/ಎಸ್‌ಟಿ ಸರ್ಕಾರಿ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎನ್, ಗುರುಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ,ಸುಬ್ರಮಣಿ, ಖಜಾಂಚಿ ಎಸ್,ವಿ, ನಾರಾಯಣಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ,ವಿ(ವಾಸು), ಬಿ,ಎನ್,ಮುನಿರಾಜು, ಬಿ,ಎಂ, ಶ್ರೀನಿವಾಸ್, ಪುಟ್ಟಮ್ಮ, ಸಹ ಕಾರ್ಯದರ್ಶಿ ಮುನಿರಾಜ, ಸಂಘಟನಾ ಕಾರ್ಯದರ್ಶಿ ತಿಮ್ಮರಾಯಪ್ಪ ವಿ, ಕುಮಾರ್ ಪಿ, ಬಸವರಾಜು ವಿ, ಇನ್ನಿತರರು ಹಾಜರಿದ್ದರು.