ಚಾಮರಾಜನಗರ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಬಿ.ಟಿ.ಕವಿತಾ
ಸಂಜೆವಾಣಿ ವಾರ್ತೆ
ಚಾಮರಾಜನಗರ,ಜು.04- ಚಾಮರಾಜನಗರ ನೂತನ ಪೆÇಲೀಸ್ ವರಿμÁ್ಠಧಿಕಾರಿಯಾಗಿ ಡಾ.ಬಿ.ಟಿ.ಕವಿತಾ ಅಧಿಕಾರ ಸ್ವೀಕರಿಸಿದರು.
ವಿಶೇಷವೆಂದರೆ, ಇವರ ಪತಿ ಚಾಮರಾಜನಗರ ಅಬಕಾರಿ ಇಲಾಖೆ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಚಾಮರಾಜನಗರದಲ್ಲಿ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮಿನಿ ಸಾಹು ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಕವಿತಾಅವರು ಈ ಹಿಂದೆ, ನಾಗರಿಕ ಹಕ್ಕು ನಿರ್ದೇಶನಾಲಯದ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕವಿತಾ ಅವರು 2016ರ ಕರ್ನಾಟಕ ಕೇಡರ್‍ನ ಅಧಿಕಾರಿಯಾಗಿದ್ದಾರೆ. ಬುಧವಾರ ಮಧ್ಯಾಹ್ನ ಚಾಮರಾಜನಗರ ಎಸ್ಪಿಯಾಗಿ ಅಧಿಕಾರಸ್ವೀಕರಿಸಿದ್ದಾರೆ.
ಪತಿ ನಾಗಶಯನ ಅಬಕಾರಿ ಇಲಾಖೆ ಉಪ ಆಯುಕ್ತರಾಗಿದ್ದರೆ, ಪತ್ನಿ ಈಗ ಚಾಮರಾಜನಗರ ಪೆÇಲೀಸ್ ವರಿμÁ್ಠಧಿಕಾರಿಯಾಗಿದ್ದಾರೆ. ಪತ್ನಿಅಧಿಕಾರ ಸ್ವೀಕಾರದಂದು ಪತಿಯೂ ಹಾಜರಾಗಿ ಶುಭಕೋರಿದ್ದಾರೆ.
ಜನ ಸ್ನೇಹಿ ಪೆÇಲೀಸ್- ಸುರಕ್ಷಿತ ಚಾಮರಾಜನಗರ: ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ”ಚಾಮರಾಜನಗರ ಜಿಲ್ಲೆಯು ಎರಡು ರಾಜ್ಯಗಳ ಗಡಿ ಹಂಚಿಕೊಂಡಿದೆ. ಚಾಮರಾಜನಗರವನ್ನು ಸುರಕ್ಷಿತ ಜಿಲ್ಲೆ ಮತ್ತು ಜನಸ್ನೇಹಿ ಪೆÇಲೀಸ್ ಮಾಡಲು ಮೊದಲ ಆದ್ಯತೆ ನೀಡಲಾಗುವುದು. ಅಪಘಾತ, ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲಾಗತ್ತದೆ ಎಂದು ನೂತನ ಎಸ್ಪಿ ಡಾ.ಬಿ.ಟಿ.ಕವಿತಾ ಅಭಯ ನೀಡಿದರು. ಪತಿಯೂ ಜಿಲ್ಲೆಯಲ್ಲಿ ಅಧಿಕಾರಿ ಆಗಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ”ಇಬ್ಬರು ಸರ್ಕಾರಿ ನೌಕರರಾಗಿದ್ದು, ಮೊದಲು ಕರ್ತವ್ಯಕ್ಕೆ ಆದ್ಯತೆ ಬಳಿಕ ವೈಯಕ್ತಿಕ ವಿಚಾರ” ಎಂದರು.