ಅರಾಭಿಕೊತ್ತನೂರು ಶನೇಶ್ವರಸ್ವಾಮಿ ಕುಂಬಾಭಿಷೇಕ
ಕೋಲಾರ,ಜು,೪-ತಾಲ್ಲೂಕಿನ ಅರಾಭಿಕೊತ್ತನೂರು ಗೇಟ್‌ನ ಪ್ರಸನ್ನ ಶನೇಶ್ವರ ಸ್ವಾಮಿ ದೇವಾಲಯದ ಪುನರ್ ಜೀರ್ಣೋದ್ಧಾರ ಕುಂಬಾಭಿಷೇಕ ಮಹೋತ್ಸವ ಅಂಗವಾಗಿ ಗಣಪತಿ ಹೋಮ, ನವಗ್ರಹಹೋಮ, ಪ್ರಧಾನ ಹೋಮ, ಕಳಾ ಹೋಮ ಮತ್ತಿತರ ಪೂಜಾ ಕಾರ್ಯಗಳನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಯಿತು.
ಮೂರು ದಿನಗಳ ಕಾಲ ಪೂಜೆಗಳು ನಡೆದಿದ್ದು, ಬುಧವಾರ ನಡೆದ ಹೋಮ, ಕುಂಬಾಭಿಷೇಕದ ನೇತೃತ್ವವನ್ನು ಗ್ರಾಪಂ ಸದಸ್ಯ ಎ.ಎಸ್.ನಂಜುಂಡೇಗೌಡ, ನಾರಾಯಣಶೆಟ್ಟಿ ಮತ್ತಿತರು ವಹಿಸಿದ್ದರು.
ಹೋಮದಲ್ಲಿ ಗ್ರಾಮದ ಮುಖಂಡರಾದ ನಾರಾಯಣಶೆಟ್ಟಿ ಸರಸ್ವತಮ್ಮ ದಂಪತಿಗಳು, ಜಯರಾಮೇಗೌಡ ಇಂದಿರಮ್ಮ ಹಾಗೂ ಪಿ.ಕೃಷ್ಣಪ್ಪ ರತ್ಮಮ್ಮ ದಂಪತಿಗಳು ಪಾಲ್ಗೊಂಡಿದ್ದರು.
ಕುಂಬಾಭಿಷೇಕದಲ್ಲಿ ಪ್ರಾಣಪ್ರತಿಷ್ಟೆ, ಕೂಷ್ಮಾಂಡಬಲಿ, ದೃಷ್ಟಧೇನು ದರ್ಶನ, ಬಿಂಬ ದರ್ಶನ, ನೇತ್ರೋನ್ಮಿಲನ, ಪಂಚಾಮೃತ ಅಭಿಷೇಕ, ಅಭಿಷೇಕ ಮತ್ತಿತರ ಪೂಜಾ ಕಾರ್ಯಗಳು ನಡೆದಿದ್ದು, ಸಾವಿರಾರು ಮಂದಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಕುಂಬಾಭಿಷೇಕ ಮಹೋತ್ಸವದ ಅಂಗವಾಗಿ ಅನ್ನದಾಸೋಹ ಹಮ್ಮಿಕೊಂಡಿದ್ದು, ಪೂಜಾ ಕಾರ್ಯಕ್ರಮವನ್ನು ಪ್ರಧಾನ ಆಗಮಿಕರಾದ ಸತ್ಯಸೋಮಶೇಖರ ದೀಕ್ಷಿತರು ಮತ್ತವರ ಸ್ನೇಹಿತರು ನಡೆಸಿಕೊಟ್ಟಿದ್ದು, ಪ್ರತಿನಿತ್ಯ ೪೮ ದಿನಗಳ ಕಾಲ ಮಂಡಲಾಭಿಷೇಕ ನಡೆಯಲಿದೆ ಎಂದು ತಿಳಿಸಿದರು.
ಪೂಜೆಯಲ್ಲಿ ಜಿಲ್ಲಾ ಪಂಚಾಯಿತಿ ಅಧೀಕ್ಷಕ ಕಿರಣ್, ಮುಖಂಡರಾದ ವಕ್ಕಲೇರಿ ರಾಮು, ಬಿಜೆಪಿ ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ವಕ್ಕಲೇರಿ ಆನಂದ್, ಬಿಜೆಪಿ ಮುಖಂಡರಾದ ಶಿವಣ್ಣ, ಲಕ್ಷ್ಮಣಗೌಡ,ಶಿವಣ್ಣ, ಗ್ರಾಮದ ಮುಖಂಡರಾದ ನಾರಾಯಣಶೆಟ್ಟಿ, ಜಯರಾಮೇಗೌಡ ಚಂದ್ರಣ್ಣ, ಗ್ರಾ.ಪಂ ಮಾಜಿ ಸದಸ್ಯ ಎ.ಶ್ರೀಧರ್, ನಿವೃತ್ತ ಶಿಕ್ಷಕ ಶ್ರೀನಿವಾಸ್, ಕೃಷ್ಣಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಎ.ಮಹೇಂದ್ರ ಮತ್ತಿತರರು ಹಾಜರಿದ್ದರು. ರಾತ್ರಿ ಕಲಾವಿದ ನರಸಿಂಹರಾಜು ಮತ್ತು ತಂಡದಿಂದ ಭಜನೆ ಕಾರ್ಯಕ್ರಮ ನಡೆಯಿತು.