ವೈದ್ಯರು ರೋಗಿಗಳಲ್ಲಿ ದೇವರನ್ನು ಕಾಣಲಿ
ಕೋಲಾರ, ಜು,೪- ರೋಗಿಗಳನ್ನು ಆರೈಕೆ ಮಾಡುವ ವೈದ್ಯರು ಭಾವೈಕ್ಯತೆಯ ಪ್ರತೀತಿ. ಕಷ್ಟದಲ್ಲಿ ಕೈ ಹಿಡಿದವರು ಎದುರಿಗೆ ಬಂದು ನಿಂತಾಗ ಅವರಲ್ಲಿ ದೇವರನ್ನು ಕಾಣುವರು. ವೈದ್ಯರನ್ನು ರೋಗಿಗಳು ದೇವರಂತೆ ಭಾವಿಸಿದ್ದಾರೆ. ವೈದ್ಯರ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಭಾವನೆ ಇದೆ. ಅವರು ನೀಡುವ ಚಿಕಿತ್ಸೆಗಳು ಒಬ್ಬರಿಗೆ ಪುನರ್ಜನ್ಮ ನೀಡಿದಂತೆ ಎನ್ನಬಹುದು ಎಂದು ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಎನ್ ಗೋಪಾಲಕೃಷ್ಣಗೌಡ ಅಭಿಪ್ರಾಯ ಪಟ್ಟರು,
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಡಾಕ್ಟರ್ ಮಹದೇವಯ್ಯ ಮತ್ತು ಡಾಕ್ಟರ್ ನಾಗವೇಣಿ ರವರನ್ನು ಸನ್ಮಾನಿಸಿ ಅವರು ಮಾತನಾಡಿ ವೈದ್ಯರು ತಮ್ಮ ಸ್ವಾರ್ಥ ಮನೋಭಾವವನ್ನು ತೊರೆದು ಸಮಾಜ ಸೇವೆಯಲ್ಲಿ ತೊಡಗಿಕೊಂಡಾಗ ಅದರಲ್ಲೂ ಬಡವರ ಸೇವೆಯನ್ನು ಮಾಡುವುದರಿಂದ ಆ ವೃತ್ತಿಗೆ ಗೌರವ ಸಲ್ಲಿಸಿದಂತೆ ಆಗುತ್ತದೆ ಎಂದು ತಿಳಿಸಿದರು.
ಎಷ್ಟೊ ಜನ ಕಷದಲ್ಲಿರುವವರು ವೈದ್ಯರನ್ನು ದೇವರಂದೆ ಭಾವಿಸಿ ಬರುತ್ತಾರೆ ಇದನ್ನು ರಾಷ್ಟ್ರೀಯ ವೈದ್ಯರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಕೋವಿಡ್ ಅಂತ ಸಂದರ್ಭದಲ್ಲಿ ಎಷ್ಟೋ ಜನರನ್ನು ತಮ್ಮ ಜೀವದ ಹಂಗನ್ನು ತೊರೆದು ಎಷ್ಟೋ ಜನರ ಪ್ರಾಣವನ್ನು ಉಳಿಸಿದಂತ ಮಹಾತ್ಮರು ವೈದ್ಯರು ಅವರನ್ನು ಎಲ್ಲಾ ಸಂದರ್ಭಗಳಲ್ಲೂ ಸಾರ್ವಜನಿಕರು ಗೌರವದಿಂದಲೇ ನಡೆಸಿಕೊಳ್ಳಬೇಕು ಎಂದರು.
ಡಾಕ್ಟರ್ ಮಹದೇವಯ್ಯರವರು ಸನ್ಮಾನ ಸ್ವೀಕರಿಸ ಮಾತನಾಡಿ ಕೆಲವರು ವೈದ್ಯಕೀಯ ವೃತ್ತಿಯನ್ನು ವ್ಯಾಪಾರವಾಗಿ ಬಳಸಿಕೊಂಡಿರಬಹುದು ಅದು ಶಾಶ್ವತವಲ್ಲದ ಕೆಲಸ. ತಮ್ಮ ವೃತ್ತಿಯನ್ನು ಪ್ರೀತಿಸುವುದರ ಜೊತೆಗೆ ಬಡವರ ಸೇವೆ ಮಾಡುವುದು ಅತ್ಯುತ್ತಮವಾದ ಮಾನವ ಜನ್ಮದ ಸಾರ್ಥಕ ಕೆಲಸ. ಈಗಾಗಲೇ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅನೇಕ ಉತ್ತಮವಾದ ಕೆಲಸಗಳನ್ನು ನಡೆಸಿಕೊಂಡು ಬಂದಿದೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಪ್ರಾಚೀನ ಕಾಲದಿಂದಲೂ ರೋಗಿಗಳ ಕೈ ಹಿಡಿದು ಗುಣಪಡಿಸುವುದರಿಂದ ಆಧುನಿಕ ಕಾಲದವರೆಗೂ ಸಮಾಜದಲ್ಲಿ ವೈದ್ಯರಿಗೆ ಗೌರವಿತವಾದ ಸ್ಥಾನವಿದೆ ಅದರೆ ಇತ್ತೀಚಿಗೆ ಬೇಜವಾಬ್ದಾರಿ ಮೋಸ ಮಾಡುವಂತಹ ನಕಲಿ ವೈದ್ಯರು ಸಂಖ್ಯೆ ಹೆಚ್ಚಾಗಿದ್ದು ಅವರ ನಿರ್ಲಕ್ಷತೇಯೇ ರೋಗಿ ಸಾಯಲು ಕಾರಣವಾಗಬಹುದು. ಕೆಲವೊಮ್ಮೆ ನಕಲಿ ವೈದ್ಯರು ಮಾಡಿದ ತಪ್ಪಿನಿಂದಾಗಿ ಕೂಡ ನಿಜವಾದ ವೈದ್ಯರಿಗೆ ಸಂಕಟವಾಗಿ ಪರಿಣಮಿಸಬಹುದು. ಅಂತಹ ನಕಲಿ ವೈದ್ಯರನ್ನು ಸರ್ಕಾರವು ಕಂಡುಹಿಡಿದು ಶಿಕ್ಷಿಸಬೇಕಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಚೇರ್ಮನ್ ಆರ್ ಶ್ರೀನಿವಾಸನ್, ಕಾರ್ಯದರ್ಶಿ ನಂದೀಶ್, ಖಜಾಂಚಿ ಬಿಪಿ ಸೋಮಶೇಖರ್, ನಾಗೇಂದ್ರ ಪ್ರಸಾದ್, ಸೀನಪ್ಪ, ಮುರಳಿ, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.