ವಚನಗಳಿಂದ ಕನ್ನಡ ನೆಲವನ್ನು ಪಸರಿಸಿದ ವಚನಕಾರ ಫಗು ಹಳಕಟ್ಟಿ
ಕೋಲಾರ,ಜು,೪– ಬಡತನದಲ್ಲೂ ಬಹುದೂರ ಊರಲ್ಲಿ ವಿದ್ಯಾಭ್ಯಾಸ ಮಾಡಿ ವಚನಗಳನ್ನು ಸಂಗ್ರಹಿಸಿ ಸಂರಕ್ಷಣೆ ಮಾಡಿದ ಆಧುನಿಕ ವಚನಕಾರ ಫ. ಗು. ಹಳಕಟ್ಟಿ ಎಂದು ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಪೋಸ್ಟ್ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು
ಅವರು ನಗರದ ರೆಡ್ಡಿ ಕಂಪ್ಯೂಟರ್ ಸೆಂಟರ್ ನಲ್ಲಿ ಬಿ. ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮ ದಿನದಲ್ಲಿ ಭಾಗವಹಿಸಿ ಮಾತಾನಾಡಿದರು.
ಹಳಕಟ್ಟಿಯವರು ಜುಲೈ ೧೮೮೦ ರಲ್ಲಿ ಧಾರವಾಡದಲ್ಲಿ ಜನಿಸಿದ್ದು ವೃತ್ತಿಯಲ್ಲಿ ಶಿಕ್ಷಕರಾಗಿದ್ದರು ಪ್ರವೃತ್ತಿಯಲ್ಲಿ ಸಾಹಿತಿಗಳಾಗಿದ್ದರು, ಇಂಗ್ಲೆಂಡಿನ ಇತಿಹಾಸ ಏಕನಾಥ ಸಾಧುಗಳ ಚರಿತೆ ಫ್ರಾನ್ಸ್ ದೇಶದ ರಾಜ್ಯ ಕ್ರಾಂತಿ ಸಿಕಂದರ್ ಬಾದಶನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ ಸಾಹಿತಿಗಳಾಗಿ ಸಾಕಷ ಹೆಸರು ಮಾಡಿದರು,ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ ವಾಗ್ಭೂಷಣದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು ಎಂದು ತಿಳಿಸಿದರು.
ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ ಸುಬ್ಬರಾಮಯ್ಯ ಅವರು ಮಾತಾನಾಡಿ ಹಳಕಟ್ಟಿಯವರು ಕನ್ನಡದವರಲ್ಲಿ ತಮ್ಮ ಭಾಷಯ ಬಗ್ಗೆ ಇದ್ದ ಅಭಿಮಾನ ಇವರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತು ಕನ್ನಡಿಗರು ಎಚ್ಚರಗೊಳದಿದ್ದರೆ ಕನ್ನಡ ಉದ್ಧಾರವಾಗದೆಂದು ಆ ಕ್ಷಣವೇ ಕನ್ನಡ ನಾಡು ನುಡಿ ನೆಲ ಜಲ ಸಾಹಿತ್ಯ ಸಂಸ್ಕೃತಿಗಾಗಿ ದುಡಿಯಲು ವಿದ್ಯಾರ್ಥಿ ದೆಸೆಯಲ್ಲಿ ದೃಢಸಂಕಲ್ಪ ಮಾಡಿದರು ಕರ್ನಾಟಕದ ಏಕೀಕರಣಕ್ಕಾಗಿ ಆಗಲೇ ಹೋರಾಟದಲ್ಲಿ ಹಾಲು ವೆಂಕಟರಾಯರ ಜೊತೆ ನಿಂತು ಅವರಿಗೆ ಸ್ಪೂರ್ತಿಯಾದರು ಎಂದು ತಿಳಿಸಿದರು
ಇಂಚರ ಸಂಸ್ಥೆಯ ಅಧ್ಯಕ್ಷ ಇಂಚರ ನಾರಾಯಣಸ್ವಾಮಿ ಮಾತಾನಡಿ ಅಂದಿನ ಕಾಲದ ಕರ್ನಾಟಕದ ಕೃಷಿಕ-ಉದ್ದಾರದ ವೀರಶೈವ ತತ್ವಾರಾಧಕ ದಾನಿಗಳೆನಿಸಿದ ಸಿರಸಂಗಿ ಲಿಂಗರಾಜರು ವೀರಶೈವ ಮಹಾಸಭಾದ ಅಧಿವೇಶನದ ಅಧ್ಯಕ್ಷರಾಗಿದ್ದ. ವಿಚಾರ ಧಾರೆ ಕೇಳಿ, ಫಕ್ಕೀರಪ್ಪನವರ ಮನಸ್ಸು ಸಾಕಷ ಗಟ್ಟಿಗೊಂಡಿತು ಎಂದರು.
ಸಂಸ್ಥೆಯ ಅಧ್ಯಕ್ಷ ಬಿ ಶಿವಕುಮಾರ್ ಮಾತಾನಾಡಿ ಸಿರಿಗೆರೆಯ ಅಂದಿನ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಾಹಾಸ್ವಾಮಿಗಳು ದಾವಣಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆಗೆ ಇವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಅವರು ಹಳ್ಳಿ ಹಳ್ಳಿಗೆ ಸೈಕಲ್ ತುಳಿದು ಮನೆ ಮನೆ ತಿರುಗಿ ವಚನಗಳ ಓಲೆಗರಿ, ತಾಳೆಗರಿ, ಕೈ ಬರಹಗಳ ಪ್ರತಿ ಸಂಗ್ರಹಿಸಲು ಪಟ್ಟ ಶ್ರಮ, ಅದಕ್ಕಾಗಿ ಆರ್ಥಿಕ ವೆಚ್ಚ ಹೆಚ್ಚಾಗಿ ಮಠದಲ್ಲಿದ್ದ ಹಳಕಟ್ಟಿಯವರನ್ನು ಸನ್ಮಾನಿಸಿದ ವೈಖರಿ ಆಶ್ಚರ್ಯ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ ನಾರಾಯಣಪ್ಪ, ಮಷಕ್ ತಾಳಿಕೋಟೆ, ಕವಿ ಡಾ. ಶರಣಪ್ಪ ಗಬ್ಬೂರು, ದೇಹದಾಡ್ಯ ಪಟು ಗೌರಿಪೇಟೆ ರಮೇಶ್, ನಿವೃತ್ತ ಎಎಸ್‌ಐ ಕೆ.ಎನ್ ರವೀಂದ್ರನಾಥ, ಗಾಯಕ ಹರ್ಷಿತ್ ವೈ , ನಾಗರಾಜರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.