ಎಸ್ಪಿ ನಾರಾಯಣ ವರ್ಗಾವಣೆ
ಕೋಲಾರ,ಜು೪:ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಈವರೆಗೆ ಕಾರ್ಯನಿರ್ವಹಿಸಿದ ನಾರಾಯಣ ಎಂ. ಅವರು ಸರ್ಕಾರದ ಅದೇಶದ ಮೇರೆಗೆ ಕೋಲಾರ ಜಿಲ್ಲೆಯಿಂದ ಕಾರವಾರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಬಿ.ನಿಖಿಲ್ ಅವರನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ.
ನಗರದ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿಗಳ ಕಚೇರಿಯಲ್ಲಿ ನಾರಾಯಣ ಎಂ. ಅವರನ್ನು ವರ್ಗಾವಣೆ ಮಾಡಿರುವ ಹಿನ್ನಲೆಯಲ್ಲಿ ಅದ್ದೂರಿಯಾಗಿ ಬೀಳ್ಗುಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ನಾರಾಯಣ ಎಂ. ಅವರು ಇಲಾಖೆ ಎಲ್ಲಾ ಸಿಬ್ಬಂದಿಗಳಿಗೂ ಅಚ್ಚುಮೆಚ್ಚಿನ ಅಧಿಕಾರಿಯಾಗಿ ಕಾರ್ಯನಿರ್ವಾಹಿದಿದ್ದರು ಸಿಬ್ಬಂದಿ ವರ್ಗವು ಭಾರವಾದ ಮನಸ್ಸಿನಿಂದ ಕಳುಹಿಸಿ ಕೊಟ್ಟು ಶುಭ ಹಾರೈಸಿದರು.