ಪಹಣಿಗಳಿಗೆ ಅಧಾರ್ ಜೋಡಣೆ
ಕೋಲಾರ,ಜು,೪- ಕಂದಾಯ ಇಲಾಖೆಗೆ ಸಂಬಂಧಿಸಿದ ಜಮೀನಿನ ಪಹಣಿಗಳಿಗೆ ಅಧಾರ್ ಕಾರ್ಡ ಸಂಖ್ಯೆಯನ್ನು ಜೊತೆಗೆ ಜಮೀನಿನ ಖಾತೆದಾರರ ಭಾವ ಚಿತ್ರವನ್ನು ಜೋಡಣೆ ಮಾಡುವುದು ಕಡ್ಡಾಯವಾಗಿರುವ ಹಿನ್ನಲೆಯಲ್ಲಿ ನಗರದ ಕೋಲಾರಮ್ಮ ಕೆರೆಯ ಅಚ್ಚುಕಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯ ರಾಜಸ್ವಾನಿರೀಕ್ಷಕರಾದ ರಾಜೇಂದ್ರ ಪ್ರಸಾದ್, ಗ್ರಾಮೀಣ ಅಭಿವೃದ್ದಿ ಅಧಿಕಾರಿ ಆನಂದ್ ಕುಮಾರ್ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಿಸಿ ಶೇ ೭೦ರಷ್ಟು ಪೂರ್ಣಗೊಳಿಸಿದ್ದಾರೆ.
ಜಿಲ್ಲಾಧಿಕಾರಿ ಅಕ್ರಂಪಾಷ ಅವರ ಸೂಚನೆ ಮೇರೆಗೆ ತಹಸೀಲ್ದಾರ್ ಹರ್ಷವರ್ಧನೆ ಮಾರ್ಗದರ್ಶನದಲ್ಲಿ ಕಳೆದ ೨ ತಿಂಗಳಿಂದ ಕಂದಾಯ ಇಲಾಖೆಯ ಸಿಬ್ಬಂದಿಗಳು ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜಮೀನು ಹೊಂದಿರುವಂತ ರೈತರ ಪಹಣಿಗಳಲ್ಲಿ ಖಾತೆದಾರರ ಅಧಾರ್ ಕಾಡ್ ಹಾಗೂ ಭಾವಚಿತ್ರಗಳನ್ನು ಅಳವಡಿಸುವ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುವು ಮಾಡಿ ಕೊಡಲಾಗಿದೆ.
ಇದೇ ರೀತಿ ತಾಲ್ಲೂಕಿನಾದಾದ್ಯಂತ ಎಲ್ಲಾ ಗ್ರಾಮಾಧಿಕಾರಿಗಳನ್ನು ಸಂಪರ್ಕಿಸಿ ರೈತರಿಗೆ ಅನುವಾಗುವ ದೆಸೆಯಲ್ಲಿ ದಾಖಲೆಗಳನ್ನು ಸಧೃಡ ಪಡೆಸುವ ಹಿನ್ನಲೆಯಲ್ಲಿ ರೈತರ ಜಮೀನುಗಳ ಪಹಣಿಗಳಿಗೆ ಅಧಾರ್ ಮತ್ತು ಭಾವಚಿತ್ರಗಳನ್ನು ಲಿಂಕ್ ಮಾಡಲಾಗುತ್ತಿದೆ. ಇದರಿಂದ ಸರ್ಕಾರಿ ಸೌಲಭ್ಯಗಳಿಂದ ಆರ್ಹ ಫಲಾನುಭವಿಗಳು ವಂಚಿತರಾಗದಂತೆ ಸದ್ಬಳಿಸಿ ಕೊಳ್ಳಲು ಅನುವುಂಟಾಗುವುದು. ಭಾಕಿ ಇರುವಂತ ಶೇ ೩೦ ರಷ್ಟು ಕಾರ್ಯವನ್ನು ಶೀಘ್ರದಲ್ಲಿ ಪೂರ್ಣಗೊಳಿಸ ಲಾಗುವುದು ಎಂದು ಕಂದಾಯ ರಾಜಸ್ವಾನಿರೀಕ್ಷಕರಾದ ರಾಜೇಂದ್ರ ಪ್ರಸಾದ್ ತಿಳಿಸಿದರು,