ಗಿಡ ನೆಟ್ಟು ಜೀವ ಸಂಕುಲ ಉಳಿಸಿ: ನಾಗರಾಜ್
ಚಿಕ್ಕಬಳ್ಳಾಪುರ.ಜು.೪- ಜಾಗತಿಕ ತಾಪಮಾನ ಕಡಿಮೆ ಗೊಳಿಸಿ ಜೀವಸಂಕುಲ ಉಸಿರಾಡಲು ಕೊಟ್ಯಾಂತರ ಗಿಡ ನೆಟ್ಟು ಸಸ್ಯ ಸಂರಕ್ಷಣೆ ಮಾಡುವುದು ಮಾನವನ ಕರ್ತವ್ಯ ಆ ನಿಟ್ಟಿನಲ್ಲಿ ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಇಲಾಖೆಗಳು,ಸಂಘ ಸಂಸ್ಥೆಗಳು ನೂರಾರು ಹುಟ್ಟಿಕೊಳ್ಳಬೇಕಿದೆ ನೆಟ್ಟ ಗಿಡಗಳನ್ನ ಉಳಿಸಿ ಬೆಳೆಸಿಕೊಳ್ಳುವುದು ಬೆಳೆದ ಮರಗಳನ್ನ ಕಡಿಯದೆ ಕಾಪಾಡಿಕೊಳ್ಳುವುದು ಬುದ್ದಿವಂತ ಪ್ರಾಣಿ ಎನಿಸಿಕೊಂಡಿರುವ ಮನುಷ್ಯರಿಗೆ ತಿಳಿದಿರಬೇಕೆಂದು ಲೀಡ್ ಬ್ಯಾಂಕ್ ಮ್ಯಾನೇಜರ್ ನಾಗರಾಜ್ ತಿಳಿಸಿದರು.
ಚಿಕ್ಕಬಳ್ಳಾಪುರ ನ್ರದ ಪೂರ್ಣ ಪ್ರಜ್ಞ ಶಾಲೆಯ ಮುಂಬಾಗದ ರಸ್ತೆಗೆ ಇಂದು ರಸ್ತೆ ಪಕ್ಕ ಸಾಲುಮರಗಿಡ ನಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪ ಅರಣ್ಯ ಸಂರಕ್ಷಣಾದಿಕಾರಿಗಳ ಕಚೇರಿ ಸಮಾಜಿಕ ಅರಣ್ಯ ವಿಬಾಗ,ಸಮಾನ ಮನಸ್ಕರ ಪ್ರಕೃತಿ ಸಂರಕ್ಷಣಾ ವೇದಿಕೆ ಕೆನರಾ ಬ್ಯಾಂಕ್ ಎಫ್ ಎಲ್ ಸಿ ಪೂರ್ಣ ಪ್ರಜ್ಞ ಶಾಲೆ ಹಾಗು ನಗರಸಭೆ ಸಂಯುಕ್ತಾಶ್ರಯದಲ್ಕಿ ಹಮ್ಮಿಕೊಂಡಿದ್ದ ವನಮಹೋತ್ಸವ ೨೦೨೪ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನುದ್ದೇಶಿಸಿ
ಲೀಡ್ ಬ್ಯಾಂಕ್ ಮ್ಯಾನೇಜರ್ ವಿ.ನಾಗರಾಜ್ ಮಾತನಾಡಿ ಪ್ರಕೃತಿ ನಮಗೆ ಎನೆಲ್ಲಾ ಕೊಟ್ಟಿದೆ ಆದ್ರೆ ನಾವು ಪ್ರಕೃತಿಗೆ ವಾಪಸ್ಸು ಕೊಡ್ತಾಇದ್ದೀವಿ ದೇಶದಾಧ್ಯಂತ ಕಾಲ ಟ್ಯಾಂತರ ಗಿಡಗಳನ್ನ ನೆಡ್ತಾ ಇದ್ದೀವಿ ಇದರಿಂದ ಜಾಗತಿಕ ತಾಪಮಾನ ಹಾಗು ಪರಿಸರ ಮಾಲಿನ್ಯ ತಡೆಯಲು ಸಹಾಯವಾಗುತ್ತದೆ ಎಂದರು.
ಉಪ ಅರಣ್ಯ ಸಂರಕ್ಷಣಾ ಕಚೇರಿ ಡಿ ಆರ್ ಎಫ್ ವೇಣುಗೋಪಾಲ್ ವನಮಹೋತ್ಸವ ವಾರಾಚರಣೆ ಮಹತ್ವವನ್ನ ತಿಳಿಸಿದರು.
ಸುಮಾರು ಮೂರು ಲಕ್ಷ ಗಿಡಗಳನ್ನು ನೆಟ್ಟು ರಾಜ್ಯ ಪ್ರಶಸ್ತಿ ಪುರಸ್ಕಾರಕ್ಕೆ ಬಾಜನಾಗಿರುವ ಗುಂಪುಮರದ ಆನಂದ್ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ನಗರಸಭಾ ಸದಸ್ಯ ಅಂಬರೀಶ್,ಸಮಾಜ ಸೇವಕ ಹೊಟೆಲ್ ರಾಮಣ್ಣ ಪರಿಸರ ನಾಶದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ಟಿಪ್ಸ್ ನೀಡಿದರು ಖಾಸಗಿ ಶಾಲೆಗಳ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಹೆನ್ರಿ ಪ್ರಸನ್ನ,ಸರ್ ಎಂ ವಿ ಕಾರ್ಮಿಕ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಭಿಲಾಷ್,ಗುಂಪು ಮರದ ಆನಂದ್ ರಸ್ತೆ ಪಕ್ಕ ಸಾಲು ಗಿಡಗಳ ರಕ್ಷಣಾ ತಂಡದ ನಾಯಕರಿಗೆ ಗಿಡ ನೀಡಿ ಸನ್ಮಾನಿಸಿದರು
ನಗರಸಭೆ ಎಇಇ ಉಮಾಶಂಕರ್ ಕೆನರಾ ಬ್ಯಾಂಕ್ ಎಫ್ ಎಲ್ ಸಿ ಸಲಹೆಗಾರ್ತಿ ಕವಿತ ಪೂರ್ಣ ಪ್ರಜ್ಞ ಶಾಲೆಯ ಅಧ್ಯಕ್ಷ ಎನ್ ವೆಂಕಟೇಶ್, ಸಮಾನ ಮನಸ್ಕರ ಸಂಘದ ಸದಸ್ಯ ಕೆ. .ಎಸ್.ನಾರಾಯಣಸ್ವಾಮಿ ವೇದಿಕೆಯಲ್ಲಿ ಉಪಸ್ತಿತರಿದ್ದರು