ತಂತ್ರಜ್ಞಾನಾಧಾರಿತ ಬೋಧನೆ ಮಕ್ಕಳ ಪರಿಣಾಮಕಾರಿ ಕಲಿಕೆಗೆ ಸಹಕಾರಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೪; ಶಿಕ್ಷಕರು ಬೋಧನೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಬೋಧಿಸುವುದರಿಂದ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಚಿತ್ರದುರ್ಗ ಡಯಟ್‌ನ ಎನ್.ಪಿ.ಇ.ಪಿ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು ಹೇಳಿದರು. ಹೊಸದುರ್ಗ ತಾಲೂಕಿನ ದೊಡ್ಡತೇಕಲವಟ್ಟಿ ಗ್ರಾಮದ ಸ.ಪ.ಪೂ.ಕಾಲೆಜು ಪ್ರೌಢಶಾಲಾ ವಿಭಾಗಕ್ಕೆ ಮಂಗಳವಾರ ಭೇಟಿ ನೀಡಿ ಎನ್.ಪಿ.ಇ.ಪಿ ಕಾರ್ಯಕ್ರಮಗಳು, ಶೈಕ್ಷಣಿಕ ಚಟುವಟಿಕೆಗಳು ಮತ್ತು ಮಕ್ಕಳ ಕಲಿಕೆ ಪರಿಶೀಲಿಸಿ ಮಾತನಾಡಿದ ಅವರು ಒಂದು ಚಿತ್ರ ನೂರು ಪದಗಳಿಗೆ ಸಮವಾಗಿದ್ದು ತಂತ್ರಜ್ಞಾನ ಬಳಕೆ ಮೂಲಕ ಪಠ್ಯಕ್ಕೆ ಪೂರಕವಾದ ಚಿತ್ರಗಳು, ವಿಡಿಯೋ ಬಳಸಿ ಬೋಧನೆ ಮಾಡಿದರೆ ವಿದ್ಯಾರ್ಥಿಗಳಲ್ಲಿ ವಿಷಯದ ನೈಜ ಪರಿಕಲ್ಪನೆ ಮೂಡಿ ಹೆಚ್ಚಿನ ಜ್ಞಾನಾರ್ಜನೆ ಬೆಳೆಯುತ್ತದೆ ಎಂದು ತಿಳಿಸಿದರು. ಶಾಲೆಯ ಶಿಕ್ಷಕರು ತಂತ್ರಜ್ಞಾನ ಬಳಕೆ ಮಾಡಿಕೊಂಡು ಬೋಧಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮಕ್ಕಳಿಗೆ ಪಠ್ಯ ವಿಷಯದ ಜೊತೆಗೆ ಎನ್.ಪಿ.ಇ.ಪಿ(ರಾಷ್ಟಿçÃಯ ಜನಸಂಖ್ಯಾ ಶಿಕ್ಷಣ ಯೋಜನೆ)ವತಿಯಿಂದ ನಡೆಸುವ ಕಾರ್ಯಕ್ರಮಗಳನ್ನು (ಆರೋಗ್ಯಕರ ಬೆಳವಣಿಗೆ, ಭಾವನಾತ್ಮಕ ಸ್ವಸ್ಥತೆ, ಮಾನಸಿಕ ಆರೋಗ್ಯ, ಲಿಂಗ ಸಮಾನತೆ, ಅಂತರ್ಜಾಲ ರಕ್ಷಣಾತ್ಮಕ ಬಳಕೆ) ಆಯೋಜಿಸಿ ಜೀವನ ಮೌಲ್ಯಗಳನ್ನು ಬೆಳೆಸಬೇಕು ಎಂದರು. ವಿದ್ಯಾರ್ಥಿಗಳು ಶ್ರದ್ಧೆ, ಸಮರ್ಪಣೆ, ಶಿಸ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ವಾರ್ಷಿಕ ಪರೀಕ್ಷೆ ಎದುರಿಸಲು ಪ್ರಾರಂಭದ ದಿನಗಳಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲಾ ವಿಷಯಗಳನ್ನು ಪ್ರತಿನಿತ್ಯ ಪುನರ್ ಮನನ ಮಾಡಿಕೊಳ್ಳಬೇಕು. ಕಠಿಣ ಪರಿಶ್ರಮ, ನಿರಂತರ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಬಿ.ಆರ್.ಪಿ ಸುರೇಂದ್ರನಾಯ್ಕ, ಸಿ.ಆರ್.ಪಿ ಲಕ್ಷö್ಮಣ್‌ನಾಯ್ಕ ಮುಖ್ಯ ಶಿಕ್ಷಕಿ ಎನ್.ಛಾಯಾದೇವಿ, ಶಿಕ್ಷಕರಾದ ಮಲ್ಲಿಕಾರ್ಜುನಪ್ಪ, ಪರಮೇಶ್ವರಪ್ಪ, ಬಿ.ಟಿ.ಶೋಭ, ರಂಗನಾಥ, ಟಿ.ವಿಜಯ ಮತ್ತಿತರರಿದ್ದರು.