ಯುವರಕ್ಷಣಾ ವೇದಿಕೆಗೆ ಪದಾಧಿಕಾರಿಗಳ ನೇಮಕ
ಸಂಜೆವಾಣಿ ವಾರ್ತೆ
ದಾವಣಗೆರೆ.ಜು.೩: ಕರ್ನಾಟಕ ಯುವರಕ್ಷಣಾ ವೇದಿಕೆ ರಾಜ್ಯ ಘಟಕದಿಂದ ನೂತನವಾಗಿ ದಾವಣಗೆರೆ ಜಿಲ್ಲಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ಸುನೀಲ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಂಘಟನೆಯು ರಾಜ್ಯದ ಸುಮಾರು 24 ಜಿಲ್ಲೆಯಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ಇಂದು ನೂತನವಾಗಿ ದಾವಣಗೆರೆ ಜಿಲ್ಲಾ ಘಟಕದ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿವಿಧ ತಾಲ್ಲೂಕು ಹಾಗೂ ವಿವಿಧ ಕ್ಷೇತ್ರಗಳಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.ಜಿಲ್ಲಾಧ್ಯಕ್ಷರಾಗಿ ಎಸ್.ಆರ್.ಶ್ಯಾಮ್ ಪ್ರಸಾದ್, ಮಹಿಳಾ ಘಟಕಕ್ಕೆ ನಾಗರತ್ನಮ್ಮ, ಉಪಾಧ್ಯಕ್ಷರಾಗಿ ಅರುಣ ಜಿ.ರೇವಣಕರ್ ಮತ್ತು ಗೌತಮ್ ಎಸ್.ಕದಂ , ಕಾರ್ಯಧ್ಯಕ್ಷರಾಗಿ ಸುಧೀರ್ ಜಿ. ಶೇಟ್, ಕಾರ್ಯದರ್ಶಿಗಳಾಗಿ ಈಶ್ವರಪ್ಪ ಕೆ.ಎಸ್., ರುದ್ರಾಚಾರ್, ಕಿರಣ್ ವಿಠಲ್ ಭಟ್, ವಿರೇಶ್ ನಾಗಪ್ಪ ಹಾವನೂರು, ಗಿರೀಶ್ ಪಿ.ಶೇಟ್ ಇತರರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ನೂತನ ಪದಾಧಿಕಾರಿಗಳು ಹಾಜರಿದ್ದರು.