ಜೇವರ್ಗಿ ಪುರಸಭೆ ಮಹಿಳಾ ಸಿಬ್ಬಂದಿ ಲೋಕಾಯುಕ್ತ ಬಲೆಗೆ
ಕಲಬುರಗಿ:ಜು.03:ಜೇವರ್ಗಿ ಪಟ್ಟಣದ ಪುರಸಭೆಯ ಮಹಿಳಾ ಸಿಬ್ಬಂದಿಯೊಬ್ಬರ ಮೇಲೆ ಕಾರ್ಯಾಚರಣೆ ಮಾಡಿ ಲಂಚ ಪಡೆಯುತ್ತಿದ್ದ ಆರೋಪಿಯನ್ನು ಲೋಕಾಯುಕ್ತರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ದ್ವಿತೀಯ ದರ್ಜೆ ಗುಮಾಸ್ತೆ ಶಾಹಿನಾಬೇಗಂ ಎಂಬ ಮಹಿಳಾ ಸಿಬ್ಬಂದಿಯೇ ಆರೋಪಿಯಾಗಿದ್ದಾರೆ.
ನೀರಿನ ಸಂಪರ್ಕ ಪಡೆಯಲು ಪಟ್ಟಣದ ನಿವಾಸಿ ಅಬ್ದುಲ್ ರೆಹಮಾನ್ ಪಟೇಲ್ ಅವರಿಗೆ ಮಹಿಳಾ ಸಿಬ್ಬಂದಿ ಹತ್ತು ಸಾವಿರ ರೂ.ಗಳ ಬೇಡಿಕೆಯನ್ನು ಇಟ್ಟಿದ್ದರು. ಅದರಂತೆ ಬುಧವಾರ ದೂರುದಾರ ಹತ್ತು ಸಾವಿರ ರೂ.ಗಳನ್ನು ನೀಡುವಾಗ ಲೋಕಾಯುಕ್ತ ಎಸ್‍ಪಿ ಅವರ ನೇತೃತ್ವದಲ್ಲಿ ಡಿವೈಎಸ್‍ಪಿ ಗೀತಾ ಬೇನಾಳ್, ಇನ್‍ಸ್ಪೆಕ್ಟರ್ ಅಕ್ಕಮಹಾದೇವಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿ ಆರೋಪಿ ಮಹಿಳೆಯನ್ನು ಲಂಚದ ಹಣದೊಂದಿಗೆ ತಮ್ಮ ವಶಕ್ಕೆ ಪಡೆದುಕೊಂಡರು.