ಬಳ್ಳಾರಿ ಎಸ್ಪಿಯಾಗಿ ಡಾ.ಶೋಭಾರಾಣಿ ಪದಗ್ರಹಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ: ಜಿಲ್ಲೆಯ ನೂತನ ಎಸ್ಪಿಯಾಗಿ ಇಂದು ಡಾ.ಶೋಭಾರಾಣಿ ವಿ.ಜೆ.ಅವರು ಪದಗ್ರಹಣ ಮಾಡಿದ್ದಾರೆ. ರಂಜಿತ್ ಕುಮಾರ್ ಬಂಡಾರು ಅವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ.
ಬೆಂಗಳೂರಿನ ಬೃಹತ್ ಮಾಹಾನಗರ ಪಾಲಿಕೆಯ ಕಾರ್ಯತಂಡದ ಹೆಚ್ಚುವರಿ ಡಿಜಿಪಿಯಾಗಿದ ಅವರನ್ನು ಇಲ್ಲಿಗೆ ಎಸ್ಪಿಯಾಗಿ ಸರ್ಕಾರ ನಿನ್ನೆ ವರ್ಗಾವಣೆ ಆದೇಶ ನೀಡಿತ್ತು.
2008 ರಲ್ಲಿ ಕೆಎಸ್ಪಿಎಸ್ ಉತ್ತೀರ್ಣರಾಗಿರುವ ಇವರು ಮೂಲತಃ ನೆಲಮಂಗಲದವರು.
ದಂತ ವೈದ್ಯಕೀಯದಲ್ಲಿ ಪದವಿ‌ಪಡೆದಿದ್ದು. 2016 ರ ಐಪಿಎಸ್ ಬ್ಯಾಚಿನವರು. ಬೆಂಗಳೂರಿನಲ್ಲಿ ಸಂಚಾರಿ ವಿಭಾಗದ ಡಿಸಿಪಿಯಾಗಿ ಕರ್ತವ್ಯಕ್ಕೆ ಸೇರದವರು, ನಂತರ ತುಮಕೂರಿನಲ್ಲಿ ಅಡಿಷನ್ ಎಸ್ಪಿಯಾಗಿ ಬಳಿಕ ಹಾಸನದಲ್ಲಿ ಎಸ್ಪಿ ಸೇರಿದಂತೆ ಹಲವಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.