ಸಂತ ಜೋಸೆಫ್ ಶಾಲೆ ರಸ್ತೆ ಮೇಲೆ ಚರಂಡಿ ನೀರು….
ಕಲಬುರಗಿ,ಜು.3- ನಗರದಹೃದಯ ಭಾಗದ ಇಂದಿರಾ ನಗರ ಬಡಾವಣೆ ಗೆ ಹೊಂದಿಕೊಂಡಿರುವ ಸಂತ ಜೋಸೆಫ್ ಶಿಕ್ಷಣ
ಸಂಸ್ಥೆ ಮುಂಬಾಗದ ರಸ್ತೆ ಮೇಲೆ ಚರಂಡಿ ನೀರು ನಿಲ್ಲುವದರಿಂದ ಕೊಳೆತ ರಾಡಿಯ ದುಗರ್ಂದ ಇಲ್ಲಿನ ನಿವಾಸಿಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯನ್ನುಂಟು ಮಾಡಿದೆ.
ಈ ಶಾಲೆಗೆ ಪ್ರತಿದಿನ 3500 ವಿದ್ಯಾರ್ಥಿಗಳು, ಸಿಬ್ಬಂದಿವರ್ಗ ಮತ್ತು ಶಾಲೆಗೆ ವಿದ್ಯಾರ್ಥಿಗಳ ಪೆÇೀಷಕರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಗುಣಮಟ್ಟದ ಶಿಕ್ಷಣ ನೀಡುವ ಈ ಶಾಲೆ, ವಿದ್ಯಾರ್ಥಿಗಳು, ಪೋಷಕರು ಚರಂಡಿ ನೀರಿನ ಸಮಸ್ಯೆ ಎದುರಿಸುವಂತಾಗಿದೆ. ತಮ್ಮ ಸಮಸ್ಯೆಯನ್ನು ತೊಡಿಕೊಂಡಿದ್ದಾರೆ. ಮಹಾನಗರ ಪಾಲಿಕೆ ತಕ್ಷಣವೇ ಇಲ್ಲಿನ ಸಮಸ್ಯೆಗೆ ಪರಿಹಾರ ಕಂಡುಕೊಂಡು, ರಸ್ತೆಯ ಮೇಲೆ ಚರಂಡಿ ನೀರು ನಿಲ್ಲದಂತೆ ಪರ್ಯಾಯ ವ್ಯವಸ್ಥೆ ನಿರ್ಮಿಸಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಮನವಿಮಾಡಿದ್ದಾರೆ.
ವಿಶೇಷವಾಗಿ ಮಳೆಗಾಲದಲ್ಲಿ ಇಲ್ಲಿನ ವಿದ್ಯಾರ್ಥಿಗಳು ಚರಂಡಿ ನೀರಿನಿಂದ ತುಂಬಾ ಹಿಂಸೆ ಅನುಭವಿಸುತ್ತಿದ್ದಾರೆ ಈ ಸಮಸ್ಯೆ ಬಗೆಹರಿಸಲು ಕಲಬುರಗಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ದಕ್ಷಿಣ ಮತಕ್ಷೇತ್ರದ ಶಾಸಕರು ಗಮನಹರಿಸ ಬೇಕು ಎಂದು ಕೂಗುಗಳು ಕೇಳಿ ಬರುತ್ತಿವೆ.