ಮನೆ ಮೇಲೆ ನಿಂತು ಎತ್ತುಗಳ ಮೆರವಣಿಗೆ ನೋಡುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು
ಕಲಬುರಗಿ,ಜು.3-ಕಾರ ಹುಣ್ಣಿಮೆ ದಿನ ಮನೆಯ ಮಾಳಿಗೆ ಮೇಲೆ ನಿಂತು ಎತ್ತುಗಳ ಮೆರವಣಿಗೆ ನೋಡುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಉದನೂರ ಗ್ರಾಮದಲ್ಲಿ ನಡೆದಿದೆ.
ರತ್ನಬಾಯಿ ಸಿದ್ದರಾಮಪ್ಪ ದಂಗಾಪೂರ ಮೃತಪಟ್ಟ ಮಹಿಳೆ.
ಕಳೆದ ತಿಂಗಳು ಜೂ.21 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಕಾರ ಹುಣ್ಣಿಮೆ ಪ್ರಯುಕ್ತ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ನಡೆಯುತ್ತಿತ್ತು. ರತ್ನಬಾಯಿ ಅವರು ಮಗಳು ವಿಜಯಲಕ್ಷ್ಮೀ ಜೊತೆ ಮನೆ ಮಾಳಿಗೆ ಮೇಲೆ ನಿಂತು ಮೆರವಣಿಗೆ ವೀಕ್ಷಿಸುತ್ತಿದ್ದರು. ಈ ವೇಳೆ ಕಾಲುಜಾರಿ ರತ್ನಬಾಯಿ ಅವರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.1 ರಂದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಮೃತ ರತ್ನಬಾಯಿ ಅವರ ಪತಿ ಸಿದ್ದರಾಮಪ್ಪ ದಂಗಾಪೂರ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.