ಶ್ರೀ ಸತ್ಯ ಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ಅತ್ಯುತ್ತಮ ಉದಯೋನ್ಮುಖ ಖಾಸಗಿ ವಿಶ್ವವಿದ್ಯಾಲಯ
ಕಲಬುರಗಿ,ಜು.3-ಕಳೆದ ತಿಂಗಳ 6 ರಂದು ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಎಕನಾಮಿಕ್ ಟೈಮ್ಸ್ ಎಜುಕೇಶನ್ ಎಕ್ಸಲೆನ್ಸ್ ಅವಾಡ್ರ್ಸ್ 2024ರ ಸಮಾರಂಭದಲ್ಲಿ ಶ್ರೀ ಸತ್ಯ ಸಾಯಿ ಯುನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ (ಎಸ್‍ಎಸ್‍ಎಸ್‍ಯುಹೆಚ್‍ಇ ) “ಉದಯೋನ್ಮುಖ ಖಾಸಗಿ/ಡೀಮ್ಡ್ ವಿಶ್ವವಿದ್ಯಾಲಯ” ವಿಭಾಗದಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.
ಈ ಪ್ರಶಸ್ತಿಯು ಶೈಕ್ಷಣಿಕ ಉತ್ಕøಷ್ಟತೆ, ಸಂಶೋಧನೆ, ಕೈಗಾರಿಕಾ ಸಹಭಾಗಿತ್ವ, ವಿದ್ಯಾರ್ಥಿಗಳ ಸಾಧನೆ, ಸಮುದಾಯದಲ್ಲಿ ತೊಡಗಿಸಿಕೊಳ್ಳುವಿಕೆ ಮತ್ತು ಭವಿಷ್ಯದ ಬೆಳವಣಿಗೆಯ ಸಾಮಥ್ರ್ಯಕ್ಕೆ ಉದಯೋನ್ಮುಖ ವಿಶ್ವವಿದ್ಯಾಲಯದ ಬದ್ಧತೆಯನ್ನು ಗುರುತಿಸುತ್ತದೆ.
ಎಸ್‍ಎಸ್‍ಎಸ್‍ಯುಹೆಚ್‍ಇ ಅನ್ನು 2019ರಲ್ಲಿ ಜಾಗತಿಕ ಮಾನವತಾವಾದಿ ಮತ್ತು ಆಧ್ಯಾತ್ಮಿಕ ನಾಯಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕರ್ನಾಟಕದ ಕಲಬುರಗಿಯಲ್ಲಿ ರಾಜ್ಯ ಖಾಸಗಿ ವಿಶವಿದ್ಯಾಲಯವಾಗಿ ಸ್ಥಾಪಿಸಿದರು. ವಿಶ್ವವಿದ್ಯಾನಿಲಯದ ದೃಷ್ಟಿಕೋನವು ಪ್ರಾಚೀನ ಭಾರತೀಯ ಸಿದ್ಧಾಂತಗಳ ಆಧಾರದ ಮೇಲೆ ಜಾಗತಿಕ ಗುಣಮಟ್ಟದ ಉನ್ನತ ಶಿಕ್ಷಣವನ್ನು ಉಚಿತವಾಗಿ ನೀಡುವುದು ಮತ್ತು ಸಾರ್ವತ್ರಿಕ ಕಲ್ಯಾಣಕ್ಕಾಗಿ ಸಮರ್ಥ ಕೈಗಳು, ಮೇಧಾವಿ ಮನಸ್ಸುಗಳು ಮತ್ತು ಪ್ರೇಮಭರಿತ ಹೃದಯಗಳನ್ನು ಹೊಂದಿರುವ ವ್ಯಕ್ತಿಗಳನ್ನು ರೂಪಿಸುವುದು. ವಿಶ್ವವಿದ್ಯಾನಿಲಯದ ಧ್ಯೇಯವಾಕ್ಯ, “ಯೋಗಃ ಕರ್ಮಸು ಕೌಶಲಮ್-ಕ್ರಿಯೆಯಲ್ಲಿ ಪರಿಪೂರ್ಣತೆಯೇ ಯೋಗ”, ಎಂಬುದನ್ನು ಪ್ರತಿಬಿಂಬಿಸುತ್ತಾ, ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ತೊಡಗಿಸಿಕೊಂಡಿದೆ.
ಎಸ್‍ಎಸ್‍ಎಸ್‍ಯುಹೆಚ್‍ಇ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಗುಣಮಟ್ಟದ ಶಿಕ್ಷಣ, ವಸತಿ, ಆಹಾರ ಮತ್ತು ಎಲ್ಲಾ ಇತರ ದೈನಂದಿನ ಅಗತ್ಯಗಳನ್ನು ಒದಗಿಸುತ್ತದೆ. ಬಹಳ ಮುಖ್ಯವಾಗಿ ಗ್ರಾಮೀಣ ಯುವಕರ ಮೇಲೆ ವಿಶೇಷ ಗಮನಹರಿಸುತ್ತದೆ. ಪ್ರಸ್ತುತ, 70% ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಬಡತನ ರೇಖೆಗಿಂತ ಕೆಳಗಿನವರು ಮತ್ತು ಸುಮಾರು 32% ಮೊದಲ ತಲೆಮಾರಿನ ಸಾಕ್ಷರರಾಗಿದ್ದಾರೆ. ವಿಶ್ವವಿದ್ಯಾಲಯದ ಪಠ್ಯಕ್ರಮವು ಸಾಂಪ್ರದಾಯಿಕ ಶಿಕ್ಷಣವನ್ನು ಮೀರಿ ವಿಸ್ತರಿಸುತ್ತದೆ, ವೈದಿಕ ಅಧ್ಯಯನಗಳು, ಪ್ರದರ್ಶನ ಕಲೆಗಳು, ವೈದ್ಯಕೀಯ ಮತ್ತು ಅರೆವೈದ್ಯಕೀಯ ಶಿಕ್ಷಣ, ಕೃಷಿ, ಮಾನಸಿಕ ಆರೋಗ್ಯ, ಯೋಗ ಮತ್ತು ಕ್ರೀಡೆಗಳನ್ನು ಒಳಗೊಂಡಿದೆ.
ಸ್ಥಾಪನೆಯಾದ 5 ವರ್ಷಗಳ ಅಲ್ಪಾವಧಿಯಲ್ಲಿ ವಿಶ್ವವಿದ್ಯಾಲಯವು ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ. ವಿಶ್ವವಿದ್ಯಾಲಯವು ಭಾರತದ ಮೊದಲ ಉಚಿತ ಖಾಸಗಿ ಗ್ರಾಮೀಣ ವೈದ್ಯಕೀಯ ಕಾಲೇಜು, ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಎಸ್‍ಎಂಎಸ್‍ಐಎಂಎಸ್‍ಆರ್) ಇದನ್ನು ಮಾರ್ಚ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಭಾರತದ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಜುಲೈ 2023 ರಲ್ಲಿ ಎಸ್‍ಎಸ್‍ಎಸ್‍ಯುಹೆಚ್‍ಇಯ ಎರಡನೇ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿದ್ದರು. ದುಬೈನಲ್ಲಿ ಏಷ್ಯಾ ಒನ್ ಆಯೋಜಿಸಿದ ಏಷ್ಯಾ-ಆಫ್ರಿಕಾ ಬ್ಯುಸಿನೆಸ್ &; ಸೋಶಿಯಲ್ ಫೆÇೀರಮ್‍ನ 20 ನೇ ಆವೃತ್ತಿಯಲ್ಲಿ ಏಷ್ಯಾ ಒನ್‍ನಿಂದ ವಿಶ್ವವಿದ್ಯಾಲಯವು ಗ್ರೇಟೆಸ್ಟ್ ಬ್ರ್ಯಾಂಡ್ 2023 ಎಂದು ಗುರುತಿಸಲ್ಪಟ್ಟಿದೆ. ಗಮನಾರ್ಹವಾಗಿ, ಎಸ್‍ಎಸ್‍ಎಸ್‍ಯುಹೆಚ್‍ಇ ಶೈಕ್ಷಣಿಕ ಪ್ರಗತಿ ಮತ್ತು ಸಂಶೋಧನಾ ಚಟುವಟಿಕೆಗಳಿಗಾಗಿ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಾದ ಎಮೋರಿ ವಿಶ್ವವಿದ್ಯಾಲಯ (ಯುಎಸ್‍ಎ), ಏಮ್ಸ್ (ದೆಹಲಿ) ಮತ್ತು ಬಿಹೆಚ್‍ಯು (ವಾರಣಾಸಿ) ಇತ್ಯಾದಿಗಳೊಂದಿಗೆ ಒಡಂಬಡಿಕೆಗಳಿಗೆ ಸಹಿ ಹಾಕಿದೆ. ವಿಶ್ವವಿದ್ಯಾಲಯವು “ಶ್ರೀ ಮಧುಸೂದನ ಸಾಯಿ ಜಾಗತಿಕ ಮಾನವೀಯ ಮಿಷನ್”ನ ಅವಿಭಾಜ್ಯ ಅಂಗವಾಗಿದೆ, ಇದು “ವಸುಧೈವ ಕುಟುಂಬಕಂ – ಒಂದು ಜಗತ್ತು, ಒಂದು ಕುಟುಂಬ” ಎಂಬ ಸಂದೇಶದೊಂದಿಗೆ ಶಿಕ್ಷಣ, ಆರೋಗ್ಯ ಸೇವೆ, ಪೌಷ್ಟಿಕತೆ ಮತ್ತು ಆಧ್ಯಾತ್ಮಿಕತೆಯ ಕ್ಷೇತ್ರಗಳಲ್ಲಿ ಸುಮಾರು 32 ದೇಶಗಳಲ್ಲಿ ಸೇವಾ ಚಟುವಟಿಕೆಗಳನ್ನು ಒಳಗೊಂಡಿದೆ.