ಜೂಜಾಟ: ಪೊಲೀಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ದುರಂತ ಕೋಲ್ಹಾರ: ತೆಪ್ಪ ಮುಗುಚಿ ಮೂವರ ಸಾವು, ಇಬ್ಬರು ಪಾರು, ಮೂವರಿಗಾಗಿ ಶೋಧ
ಕೊಲ್ಹಾರ,ಜು.3-ರಾಷ್ಟೀಯ ಹೆದ್ದಾರಿಯ ಕೃಷ್ಣಾ ನದಿಯ ಸೇತುವೆ ಹತ್ತಿರ ಜೂಜಾಟ ಆಡುತ್ತಿದ್ದ ಸಂದರ್ಭದಲ್ಲಿ ಪೆÇಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ಜೂಜಾಟವಾಡುತಿದ್ದ ಸುಮಾರು ಎಂಟು ಜನ ತೆಪ್ಪದಲ್ಲಿ ತಪ್ಪಿಸಿಕೊಳ್ಳುವ ಬರದಲ್ಲಿ ತೆಪ್ಪ ಮುಗುಚಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಈಜಿ ದಡ ಸೇರಿದ್ದಾರೆ. ಮೂವರು ನದಿಯಲ್ಲಿ ನಾಪತ್ತೆಯಾಗಿದ್ದು ಅವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ.
ತಪ್ಪಿಸಿಕೊಳ್ಳುವ ಭರದಲ್ಲಿ ತೆಪ್ಪ ಮುಗುಚಿ ಪುಂಡಲೀಕ ಯಂಕಂಚಿ (35) ತಯ್ಯಬ್ ಚೌಧರಿ (42), ದಶರಥ ಗೌಡರ ಸೂಳಿಬಾವಿ(66) ಸಾವಿಗೀಡಾಗಿದ್ದಾರೆ. ಇನ್ನುಳಿದ ಮೂವರಿಗಾಗಿ ಶೋಧ ಕಾರ್ಯಚರಣೆಗೆ ಮುಂದುವರಿದಿದೆ.
ಘಟನೆ ವಿವರ:
ಸ್ಥಳೀಯರ ಮಾಹಿತಿಯ ಪ್ರಕಾರ ಕೊಲ್ಹಾರ ಪಟ್ಟಣದ ಏಳು ಜನ ಹಾಗೂ ಕೂಡಗಿ ಗ್ರಾಮದ ಓರ್ವ ಕೊಲ್ಹಾರ ಸೇತುವೆ ಸಮೀಪ ಜೂಜಾಟ ಆಡುತ್ತಿರುವ ಮಾಹಿತಿ ತಿಳಿದು ಕೊಲ್ಹಾರ ಠಾಣೆಯ ಪೆÇಲೀಸರು ಏಕಾಏಕಿ ದಾಳಿ ನಡೆಸಿದ್ದರು. ಪೊಲೀಸರ ದಾಳಿಯಿಂದ ತಪ್ಪಿಸಿಕೊಳ್ಳಲು ನದಿಯ ಮೂಲಕ ಮೀನುಗಾರರು ಬಳಸುತ್ತಿದ್ದ ತೆಪ್ಪ ಬಳಸಿ ತಪ್ಪಿಸಿಕೊಳ್ಳುವ ಬರದಲ್ಲಿ ಈ ದುರ್ಘಟನೆ ಜರುಗಿದೆ.
ಘಟನೆಯ ಸುದ್ದಿ ತಿಳಿಯುತ್ತಲೇ ಪೆÇಲೀಸರು, ಅಗ್ನಿಶಾಮಕ ಸೇವಾ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ನದಿಯಲ್ಲಿ ನಾಪತ್ತೆಯಾಗಿರುವವರ ಶೋಧಕಾರ್ಯ ನಡೆಸುತ್ತಿದ್ದಾರೆ.