ಏಳು ಸಂಸ್ಥೆಗಳೊಂದಿಗೆ ಸಂಗೀತ ವಿವಿ ಒಡಂಬಡಿಕೆ
ಸಂಜೆವಾಣಿ ನ್ಯೂಸ್
ಮೈಸೂರು.ಸೆ.27:- ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಸಂಗೀತ ಮತ್ತು ಪ್ರದರ್ಶಕ ಕಲೆಗಳ ಹಲವು ಪ್ರಕಾರಗಳಲ್ಲಿ ಶಿಕ್ಷಣವನ್ನು ನೀಡುವ ದ್ಯೇಯದೊಂದಿಗೆ ಈಗಾಗಲೇ 55 ಸಂಸ್ಥೆಗಳ ಒಡಂಬಡಿಕೆ ಪೂರ್ಣಗೊಂಡಿದ್ದು, ಗುರುವಾರ ಏಳು ಸಂಸ್ಥೆಗಳೊಂದಿಗೆ ಕುಲಪತಿಗಳ ಅಧ್ಯಕ್ಷತೆಯಲ್ಲಿ ಒಡಂಬಡಿಕೆ ಕಾರ್ಯ ನೆರವೇರಿತು. ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡು ಒಟ್ಟು 62 ಶಿಕ್ಷಣ ಸಂಸ್ಥೆಗಳು ವಿವಿಯೊಡನೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಡಿಪೆÇ್ಲಮಾ ಇನ್ ಮೂಡಲಪಾಯ ಯಕ್ಷಗಾನ, (ಬಯಲಾಟ), ಕರ್ನಾಟಕ ಭರತಾಗಮ ಪ್ರತಿಷ್ಠಾನದ ಡಾ.ಚೂಡಾಮಣಿ ನಂದಗೋಪಾಲ್ ನೇತೃತ್ವದ ಸಂಸ್ಥೆಯು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಸಂಶೋಧನಾ ಕೋರ್ಸ್ ಗಳನ್ನು ಆರಂಭಿಸಲು ಒಡಂಬಡಿಕೆ ಮಾಡಿಕೊಂಡರು.
ಜೊತೆಗೆ ಧನ್ವಂತರಿ ಅಕಾಡೆಮಿಯ ಡಾ.ಗಣೇಶ್ ನೇತೃತ್ವದ ಬೆಂಗಳೂರಿನ ವರ್ಣ ಕಲಾನಿಕೇತನ, ಸಿದ್ದಲಿಂಗೇಶ್ವರ ವೇದ ಸಂಸ್ಕೃತ ಪಾಠಶಾಲೆ, ಬೆಳಗಾವಿಯ ನಂದೀಶ್ವರ ಸದರಿ ಸಂಸ್ಥೆಯವರು ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ, ಭರತನಾಟ್ಯ, ಡಿಪೆÇ್ಲಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್ ಗಳಿಗೆ ಒಡಂಬಡಿಕೆ ಮಾಡಿಕೊಂಡರು.
ಇದೇ ವೇಳೆ ಕುಲಪತಿ ಪೆÇ್ರ.ವಿ.ಬೆಟ್ಟಯ್ಯಕೋಟೆ ಮಾತನಾಡಿ, ಒಡಂಬಡಿಕೆಯ ವಿಧಿ ವಿಧಾನ, ಕಾರ್ಯ ಚಟುವಟಿಕೆಗಳ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು. ಸಂಗೀತ ವಿಶ್ವವಿದ್ಯಾಲಯವು ಸಂಗೀತಾದಿ ಕಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಈ ಒಡಂಬಡಿಕೆ ಕಾರ್ಯವನ್ನು ರಾಜ್ಯಾದ್ಯಂತ ತನ್ನ ಕೇಂದ್ರಗಳನ್ನು ಸ್ಥಾಪಿಸಿ ಸಂಗೀತಾಧಿ ಪ್ರದರ್ಶನ ಕಲೆಗಳ ಶಿಕ್ಷಣ ನೀಡುವ ಮಹತ್ತರವಾದ ಹೆಜ್ಜೆ ಇಟ್ಟಂತಾಗಿದೆ ಎಂದು ಹೇಳಿದರು.
ಮುಂದುವರೆದು ಕರ್ನಾಟಕ ಸಂಘದ ಅಧ್ಯಕ್ಷ ಪೆÇ್ರ. ಜಯಪ್ರಕಾಶಗೌಡ ಮಾತನಾಡಿ, ಸಂಗೀತ ವಿಶ್ವವಿದ್ಯಾಲಯವು ತನ್ನೊಟ್ಟಿಗೆ ಇತರರನ್ನು ಬೆಳೆಸುವ ಕರ?ಯವನ್ನು ಆರಂಬಿಸಿದೆ. ಇದರಿಂದಾಗಿ ಹಲವು ಸಂಸ್ಥೆಗಳು ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಿದೆ ಎಂದು ಹೇಳಿದರು. ಜೊತೆಗೆ ರ?ನಾಟಕ ಭರತಾಗಮ ಪ್ರತಿಷ್ಠಾನದ ಡಾ ಚೂಡಾಮಣಿ ನಂದಗೋಪಾಲ್ ಇವರು ಮಾತನಾಡುತ್ತಾ, ಕುಲಪತಿಯವರ ನೇತೃತ್ವದಲ್ಲಿ ರಾಜ್ಯದ್ಯಂತ ವಿಶೇಷ ಸಂಗೀತ ಮತ್ತು ನೃತ್ಯ ಪರೀಕ್ಷೆಗಳು ಯಶಸ್ವಯಾಗಿ ನಡೆಸುವಲ್ಲಿ ವಿಶ್ವವಿದ್ಯಾಲಯದ ಹಾಗೂ ಕುಲಪತಿಗಳ ಕರ?ಯವೈಖರಿಯ ಕುರಿತು ಮೆಚ್ಚುಗೆಯನ್ನು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.