ಪರಿಸರ ರಕ್ಷಿಸಿ ಜೀವ ಸಂಕುಲ ಉಳಿಸಿ:ದಾನೇಶ ಅವಟಿ
ವಿಜಯಪುರ,ಜು.3 : ದೇಶದ ಪ್ರತಿಯೊಬ್ಬ ನಾಗರಿಕರು ಗಿಡ ಮರಗಳನ್ನು ನೆಡುವ ಮೂಲಕ ಪರಿಸರ ರಕ್ಷಿಸಿ ಜೀವ ಸಂಕುಲ ಉಳಿಸಬೇಕು ಎಂದು ವಿಜಯಪುರ ವಾರ್ಡ್ ಸಮಿತಿ ಬಳಗ ಸಂಚಾಲಕ, ನ್ಯಾಯವಾದಿ ದಾನೇಶ ಅವಟಿ ಕರೆ ನೀಡಿದರು.
ನಗರದ ಮನಗೂಳಿ ರಸ್ತೆಯ ಬಾಲಕಿಯರ ಬಾಲ ಮಂದಿರದ ಆವರಣದಲ್ಲಿ ವಿಜಯಪುರ ವಾರ್ಡ್ ಸಮಿತಿ ಬಳಗ ಹಾಗೂ ಬಾಲಕಿಯರ ಬಾಲ ಮಂದಿರ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಸಸಿ ನೆಡುವ ಹವ್ಯಾಸ ಮೂಡಿಸಬೇಕಲ್ಲದೆ ಅವುಗಳನ್ನು ಸರಿಯಾಗಿ ಪೆÇೀಷಿಸುವ ಜವಾಬ್ದಾರಿಯನ್ನು ನೀಡಬೇಕು. ಅಂದರೆ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲು ಸಾಧ್ಯ ಎಂದರು.
ಮಹಾನಗರ ಮತ್ತು ಗ್ರಾಮೀಣ ಸಮಗ್ರ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ ಮಠಪತಿ ಮಾತನಾಡಿ, ಹಸಿರು ತುಂಬಿದ ಬೆಟ್ಟ ಗುಡ್ಡಗಳು ಇಂದು ಮಾನವನ ಸ್ವಾರ್ಥಕ್ಕೆ ಬಲಿಯಾಗಿ ನಗರೀಕರಣ, ಕಾರ್ಖಾನೇಕರಣ, ವಾಹನೀಕರಕರಣದಿಂದ ಪರಿಸರ ಪ್ರದೂಷಣಗೊಂಡು ವಾತಾವರಣದಲ್ಲಿ ಏರು- ಪೇರಾಗಿ ಮಾನವನ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದು ಮುಂದಿನ ದಿನಗಳಲ್ಲಿ ಘೋರ ಪರಿಣಾಮ ಬೀರಲಿದೆ. ಕಾರಣ ಮಾನವ ಜನಾಂಗ ಕೂಡಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕೆಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಯಲ್ಲಪ್ಪ ಇರಕಲ್ ಮಾತನಾಡಿ, ಪರಿಸರವನ್ನು ನಾವು ರಕ್ಷಿಸಿದರೆ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಕಾರಣ ಎಲ್ಲರೂ ಪರಿಸರ ರಕ್ಷಣೆಗೆ ಕಂಕಣಬದ್ಧರಾಗಿ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.
ಬಾಲ ಮಂದಿರ ಅಧೀಕ್ಷಕಿ ಸುಮಂಗಲಾ ಕರಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೋಹಿಣಿ ದೇಸಾಯಿ, ರೇಣುಕಾ ಕಾಂಬಳೆ, ಭುವನಾ ಸಾಲೋಟಗಿ, ರಾಧಾಬಾಯಿ ಜಗದಾಳೆ, ಗೀತಾ ಮಾದರ, ರಂಜಿತಾ ಕುಮಟೆ, ವಿದ್ಯಾ ನಾಗೋಡ, ಸ್ನೇಹಾ ಮರಾಠೆ, ರೇಣುಕಾ ಪಾಟೀಲ ಇದ್ದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಸರ್ವ ಮಂಗಳಾ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.