ಬಸ್ ನಿಲ್ದಾಣಕ್ಕೆ – ಅಭಿದ್ ಗದ್ಯಾಳ್ ಭೇಟಿ
ಇಂಡಿ : ಜು.3:ನಗರದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆಯನ್ನು ಅರಿತು ಸುಗಮ ಸಂಚಾರಕ್ಕಾಗಿ ಬಸ್ ನಿಲ್ದಾಣಕ್ಕೆ ಕಂದಾಯ ಉಪ ವಿಭಾಗಧಿಕಾರಿ ಅಭಿದ್ ಗದ್ಯಾಳ್ ಭೇಟಿ ನೀಡಿದರು.
ಮಧ್ಯ ಬಾಗದಿಂದ ಹೊರಗೋಗುತ್ತಿರುವ ಬಸುಗಳ ಮಾರ್ಗ ಬಂದ್ ಮಾಡಿ ವಿಜಯಪುರ ಹೋಗುವ ಮಾರ್ಗ ದಿಂದ ಹೊರಗಡೆ ಹೋಗಲು ಅನುವು ಮಾಡಿಕೊಟ್ಟರು. ಇದರಿಂದ ಟ್ರಾಫಿಕ್ ಸಮಸ್ಯ ಬಗೆಹರಿಸುವ ನಿಟ್ಟಿನಲ್ಲಿ ಪ್ರಯಾಣಿಕರ ಹಿತೈಷಿಯಿಂದ ಈ ನಿರ್ಧಾರನ್ನು ತಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.ಸಮಸ್ಯೆ ಬಗೆಹರಿದರೆ ಇದನ್ನೇ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.ಇದರಿಂದ ಆಟೋ ರಿಕ್ಷಾ ಚಾಲಕರು ತಮ್ಮ ಉದ್ಯೋಗ ಕ್ಕೆ ತೊಂದರೆ ಆಗುತ್ತದೆ ಎಂದು ಭಯ ಭೀತಾರಾಗಿದ್ದಾರೆ. ಈ ಸಂದರ್ಭದಲ್ಲಿ ನಗರದ ಸಿ ಪಿ ಆಯ್ ರತನಕುಮಾರ್ ಜಿರಗಿಹಾಳ್, ಕೆ ಎಸ್ ಆರ್ ಟಿ ಸಿ ಘಟಕ ವ್ಯವಸ್ಥಾಪಕ ಸಾಯಬಗೌಡ ಬಿರಾದಾರ, ಪುರಸಭೆ ಹೆಲ್ತ್ ಇನ್ಸ್ಪೆಕ್ಟರ್ ಲಕ್ಷ್ಮಿಪುತ್ರ ಸೋಮನಾಯಕ, ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.