ಸಾರ್ವಜನಿಕರಿಗೆ ಅನಗತ್ಯವಾಗಿ ಅಲೆದಾಡಿಸದೇ ಸಕಾಲದಲ್ಲಿ ಕೆಲಸ ನಿರ್ವಹಿಸಿ: ಡಿಸಿ ಗೋವಿಂದರೆಡ್ಡಿ
ಚಿಟಗುಪ್ಪ:ಜು.3: ಸಾರ್ವಜನಿಕರಿಗೆ ಅನಗತ್ಯವಾಗಿ ಅಲೆದಾಡಿಸದೇ ಸಕಾಲದಲ್ಲಿ ಕೆಲಸ ನಿರ್ವಹಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ.ಗೋವಿಂದ ರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದ ಬಳಿಕ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸುಖ ಸುಮ್ಮನೆ ನೆಪ ಹೇಳಿ ಸಾರ್ವಜನಿಕರನ್ನು ತಮ್ಮ ಕಚೇರಿಗೆ ಅಲಿಯದಂತೆ ನಿಗದಿ ಸಮಯದೊಳಗೆ ಕೆಲಸ ಮಾಡಿಕೊಡಬೇಕು ಎಂದು ಖಡಕ್ ಸೂಚನೆ ನೀಡಿದರು. ಸಭೆಯಲ್ಲಿ ಭೂ ವಿವಾದ, ಬೆಳೆ ಪರಿಹಾರ, ಕಾಡು ಹಂದಿಗಳ ಕಾಟದಿಂದ ಬೆಳೆ ನಾಶ, ಸ್ಮಶಾನಕ್ಕೆ ದಾರಿ, ಬೀದಿ ನಾಯಿಗಳಿಂದ ಕಾಟ, ಅವ್ಯವಹಾರ ತನಿಖೆ, ಸಿಸಿ ಕ್ಯಾಮರಾ ದುರಸ್ಥಿ ಸೇರಿದಂತೆ ಸುಮಾರು 28 ಅರ್ಜಿಗಳನ್ನು ಸ್ವೀಕರಿಸಿಲಾಯಿತು. ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸುವ ಪ್ರಯತ್ನ ಕೂಡ ಮಾಡಲಾಯಿತು. ಕನ್ನಡ ಸೇನೆ ಕಾರ್ಯಕರ್ತರು ಕೂಡ ಮನವಿ ಪತ್ರ ಸಲ್ಲಿಸಿ ಬಸ್ಸಿನ ಸಮಸ್ಯೆ ಆಸ್ಪತ್ರೆಯ ಸಮಸ್ಯೆ ಸಿ ಸಿ ಕ್ಯಾಮೆರಾ. ಸಮಸ್ಯೆ ಬಗೆಹರಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರಿ ಚನ್ನಬಸವಣ್ಣ ಲಂಗೋಟಿ, ಸಹಾಯಕ ಆಯುಕ್ತ ಪ್ರಕಾಶ ಕುದರೆ, ಆಹಾರ ಇಲಾಖೆಯ ಉಪನಿರ್ದೇಶಕಿ ಸುರೇಖಾ, ತಹಸೀಲ್ದಾರ್ ರವೀಂದ್ರ ದಾಮ, ಪುರಸಭೆ ಮುಖ್ಯಧಿಕಾರಿ ಹುಸಾಮೋದ್ದಿನ ಬಾಬಾ, ಸಿಪಿಐ ಶ್ರೀನಿವಾಸ್ ಅಲ್ಲಾಪುರೆ, ಗ್ರೇಡ್ 2 ತಹಸೀಲ್ದಾರ್ ಜೈಶ್ರೀ, ಪಿಎಸ್‍ಐ ಬಾಷುಮಿಯಾ ಕೊಂಚೂರ್, ಸೇರಿದಂತೆ ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.