ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ
ಬೀದರ:ಜು.3:ಕೋಟಿಗಟ್ಟಲೆ ಆದಾಯವಿದ್ದರೂ ದೇವಸ್ಥಾನದ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂಬ ದೂರು ಇಂದು ನಿನ್ನೆಯದಲ್ಲ. ಮುಜರಾಯಿ ಇಲಾಖೆಯು ದೇವಸ್ಥಾನದಿಂದ ಬರುವ ಆದಾಯದಲ್ಲೇ ದೇವಾಲ ಅಭಿವೃದ್ಧಿ ಮಾಡಬಹುದು. ಅಗತ್ಯ ಸೌಕರ್ಯಗಳನ್ನು ಒದಗಿಸಬಹುದು. ಆದರೆ ಮಾಡುತ್ತಲೇ ಇಲ್ಲ ಎಂಬ ದೂರುಗಳಿದ್ದು ಇಲ್ಲಿ ಬರುವ ಭಕ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಹೀಗಾಗಿ ಅಧಿಕಾರಿಗಳು ಅದರ ಕಡೆಗೆ ಗಮನ ಹರಿಸಿ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿನ ಹಲವು ವಿಸ್ಮಯಗಳನ್ನು ಒಡಲಲ್ಲಿರುವ ಸುಪ್ರಸಿದ್ಧ ಹೊನ್ನಿಕೇರಿಯ ಸಿದ್ದೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಇಂದು ಸಹಾಯಕ ಆಯುಕ್ತರ ಜೋತೆ ಶಾಸಕರಾದ ಡಾ ಶೈಲೇಂದ್ರ ಬೆಲ್ದಾಳೆ ಅವರು. ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿರುವ ಕುಂದು ಕೊರತೆ ಕುರಿತು ಸಭೆ ನಡೆಸಿ ಭಕ್ತರ ಮತ್ತು ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಬೀದರ್ ದಕ್ಷಿಣ ಕ್ಷೇತ್ರದ ಹೊನ್ನಿಕೇರಿ ಗ್ರಾಮದ ಬೆಟ್ಟದ ನಡುವೆ ಶ್ರೀ ಕ್ಷೇತ್ರ ಹೊನ್ನಿಕೇರಿ ಸಿದ್ದೇಶ್ವರ ದೇಗುಲವಿದೆ. ಶತಮಾನದಷ್ಟು ಪುರಾತನವಾದ ಈ ದೇವಾಲಯ, ಹಲವು ವಿಭಿನ್ನ ವಿಸ್ಮಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ.ಬೀದರ್ ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಈ ದೇಗುಲಕ್ಕೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿ ಅನೇಕ ರಾಜ್ಯಗಳಿಂದ ಭಕ್ತರ ದಂಡು ಹರಿದು ಬರುತ್ತದೆ. ದೇಗುಲದ ಸುತ್ತ ನೀರಿನ ಹೊಂಡಗಳು ಇದ್ದು, ನೀರು ಕುಡಿದರೆ ದೇವರ ಆಶೀರ್ವಾದ ದೊರೆಯುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆ,
ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಬಂದು ಹರಕೆ ತಿರಿಸಿ ದೇವರ ದರ್ಶನ ಪಡೆದುಕೊಂಡು ಹೋಗುತ್ತಾರೆ ಹೀಗಾಗಿ ದೇವಸ್ಥಾನದ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಈ ದೇವಸ್ಥಾನದಲ್ಲಿ ಭಕ್ತರು ಅಡುಗೆ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಗಿಡದ ನೆರಳಿನಲ್ಲಿ, ಬಯಲು ಪ್ರದೇಶದಲ್ಲಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ಊಟ ಮಾಡಿಕೊಂಡು ಹೊಗುತ್ತಾರೆ, ಇಲ್ಲಿಗೆ ಬರುವ ಭಕ್ತರಿಗೆ ಸರಿಯಾಗಿ ಸ್ನಾನದ ಕೋಣೆ ವ್ಯವಸ್ಥೆಯೂ ಇಲ್ಲ ಸೂಕ್ತ ಶೌಚಾಲಯ ವ್ಯವಸ್ಥೆ ಇಲ್ಲ ಎಂಬ ದೂರು ಬಂದಿವೆ
ಹೀಗಾಗಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎನ್ನುವುದು ಜನರ ಮನವಿಯಾಗಿದೆ.
ಮುಜರಾಯಿ ಇಲಾಖೆಯ ಸುಪರ್ದಿಗೆ ಬರುವ ಈ ದೇವಸ್ಥಾನಕ್ಕೆ ಕೊಟ್ಯಾಂತರ ರೂಪಾಯಿ ಹಣ ಹರಿದುಬರುತ್ತದೆ. ಆದರೇ ಭಕ್ತರು ಕಾಣಿಕೆಯಾಗಿ ನೀಡಿದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಯಾರಿಗೂ ಕೂಡಾ ಅರ್ಥವಾಗುತ್ತಿಲ್ಲ ಇಲ್ಲಿನ ಸಾವಿರಾರು ಭಕ್ತರು ಬರುವ ಯಾತ್ರಾ ಸ್ಥಳದಲ್ಲಿ ಸ್ನಾನಕ್ಕೆ ಹಾಗೂ ಅಡುಗೆ ಮಾಡಲು ಉತ್ತಮ ಸ್ಥಳವಿಲ್ಲ ಹೀಗಾಗಿ ಭಕ್ತರು ಮೂಲಭೂತ ಸೌಲಭ್ಯ ವಂಚಿತರಾಗಿಯೇ ದೇವರ ದರ್ಶನ ಪಡೆದುಹೋಗುವಂತ ಸ್ಥಿತಿ ಇದೆ. ಜಿಲ್ಲಾಡಳಿತ ಭಕ್ತರು ನೀಡಿರುವ ಹಣವನ್ನಾದರೂ ಬಳಸಿಕೊಂಡು ಮೂಲಭೂತ ಸೌರರ್ಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ದೂರಿದರು.
ಬಳಿಕ ಶಾಸಕರು ಮಾತನಾಡಿ ಇಲ್ಲಿರುವ ಮೂಲ ಸೌಕರ್ಯ ತೊಂದರೆ ಶೀಘ್ರ ಬಗೆಹರಿಯಬೇಕು ದೇವಸ್ಥಾನ ಅಭಿವೃದ್ಧಿ ಹೊಂದಿದೆ ಮಾತ್ರ ಹೊರ ರಾಜ್ಯದಿಂದ ಜನರು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ ಎನ್ನುವುದು ಭಕ್ತರ ಮನವಿ ಶೀಘ್ರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು ಹಾಗೂ ಈ ಸಂದರ್ಭದಲ್ಲಿ ದೇವಸ್ಥಾನದ ಸ್ಥಳದಲ್ಲಿ ತಮ್ಮ ಅನುದಾನದಲ್ಲಿ ಯಾತ್ರಿ ನಿವಾಸ ನಿರ್ಮಿಸುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತಕರಾದ ಲವೀಶ ಒರಡಿಯಾ, ಗ್ರಾಮಪಂಚಾಯಿತಿ ಅಧ್ಯಕ್ಷ ಪರಶುರಾಮ ಪತ್ತಗೊಂಡ, ಉಪಾಧ್ಯಕ್ಷರಾದ ಸಂಜುಕುಮಾರ ಮಾಶೆಟ್ಟಿ, ಹಣಮಂತಪ್ಪ ಮೈಲಾರೆ, ಅಶೋಕ ಪಾಟೀಲ, ಸಂತೋಷ ರೆಡ್ಡಿ, ಅರುಣಕುಮಾರ ಬಾವಗಿ, ಸೂರ್ಯಕಾಂತ,
ಬಾಬುರಾವ, ವಿನೋದ, ರವಿಕುಮಾರ್, ರೇವಣಯ್ಯಾ ಸ್ವಾಮಿ,ಸಿದ್ದು ಸ್ವಾಮಿ ಅರವಿಂದ ಬುಳ್ಳಾ ಮತ್ತಿತರರು ಉಪಸ್ಥಿತರಿದ್ದರು.