ಫುಟ್ಪಾತ್ ಒತ್ತುವರಿ ವಿರುದ್ಧ ಕಾನೂನು ಕ್ರಮ
ಔರಾದ :ಜು.3: ಪಟ್ಟಣದಲ್ಲಿ ಫುಟ್‍ಪಾತ್ ಮೇಲೆ ಖಾಯಂ ಶೆಡ್ ನಿರ್ಮಾಸಿಕೊಂಡು ರಸ್ತೆ ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ ಇದರಿಂದ ಜನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ ಆದ್ದರಿಂದ ಅತಿಕ್ರಮಣ ಜಾಗ ಖಾಲಿ ಮಾಡಬೇಕು ಇಲ್ಲವಾದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ವಾಮಿದಾಸ ತಿಳಿಸಿದ್ದಾರೆ.
ನಿರ್ದಿಷ್ಟ ಪ್ರದೇಶಗಳಲ್ಲಿ ಪಟ್ಟಣ ಪಂಚಾಯತಿಯವರು ಸೂಚಿಸುವ ಸ್ಥಳಗಳಲ್ಲಿ ತಳ್ಳು ಬಂಡಿಗಳಲ್ಲಿ ವ್ಯಾಪಾರ ಮಾಡಬಹುದಾಗಿದೆ. ಆದರೆ ಫುಟ್ ಪಾತ್‍ಗಳ ಮೇಲೆ ಹಾಗೂ ರಸ್ತೆಯ ಬದಿಗೆ ಬಂಡಿಗಳನ್ನು ನಿಲ್ಲಿಸಿ ಹಾಗೂ ಖಾಯಂ ಶೆಡ್‍ಗಳಗಳನ್ನು ನಿರ್ಮಿಸಿ ವ್ಯಾಪಾರ ಮಾಡುವುದು ಕಾನೂನು ಬಾಹಿರವಾಗಿರುತ್ತದೆ. ಇದರಿಂದ ಸಾರ್ವಜನಿಕರಿಗೆ/ಶಾಲೆ ಮಕ್ಕಳಿಗೆ ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದ್ದು, ಅಪಘಾತವಾಗುವಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿವೆ, ಆದುದ್ದರಿಂದ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವಂತಹವರು ತಳ್ಳು ಬಂಡಿ ಹಾಗೂ ಶೆಡ್/ಡಬ್ಬಾಗಳನ್ನು (3) ದಿವಸಗಳ ಒಳಗಾಗಿ ಸ್ವತಃ ತೆರವು ಮಾಡಿಕೊಳ್ಳಬೇಕು. ತಪ್ಪಿದ್ದಲ್ಲಿ ಪಟ್ಟಣ ಪಂಚಾಯತ ವತಿಯಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಾಗುವುದೆಂದು ಪ.ಪಂ. ಮುಖ್ಯಾಧಿಕಾರಿ ಸ್ವಾಮಿದಾಸ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ