ಕಮರವಾಡಿ: ಗ್ರಾಮದ ಅಭಿವೃದ್ದಿಗಾಗಿ ಸಚಿವರಿಗೆ ಮನವಿ
ವಾಡಿ:ಜು.3: ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಮದ ಅಭಿವೃದ್ದಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿದ ಮುಖಂಡರು, ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ. ಗ್ರಾಮದ ಮುಸ್ಲಿಂ ಸಮುದಾಯದ ಈದ್ಗಾ ಮೈದಾನಕ್ಕೆ ಸುತ್ತಲೂ ತಡೆಗೋಡೆ ಹಾಗೂ ಕಬ್ರುಸ್ಥಾನಗೆ ಕಾಂಪೌಡ್ ಗೇಟ್ ನಿರ್ಮಿಸಬೇಕು. ವಾರ್ಡ್ 2 ಅಗತ್ಯವಿರುವ ಕಡೆ ಸಿಸಿ ರಸ್ತೆ ನಿರ್ಮಾಣಕ್ಕಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಗ್ರಾಪಂ ಮಾಜಿ ಅಧ್ಯಕ್ಷ ಢಾಕೂ ಠಾಠೋಡ, ಹಾಲಿ ಸದಸ್ಯ ರಹೆಮಾನ್ ಸಾಬ್ ಬಾಂಬೆ, ಕಾಂಗ್ರೆಸ್ ಮುಖಂಡ ಹರಿಸಿಂಗ್ ಚವ್ಹಾಣ ಇದ್ದರು.