ಹಸಿರು ಗಿಡ ಬೆಳೆಸಿ ನಾಡ ಉಸಿರು ಉಳಿಸಿ: ಅಶ್ವಿನಿ ಚವ್ಹಾಣ
ಕಲಬುರಗಿ:ಜು.3: ಮಾನವನ ಆರೋಗ್ಯದ ವೃದ್ಧಿಗೆ ಸಸ್ಯ ಸಂಪತ್ತು ಪೂರಕವಾಗಿದೆ. ಬಿಸಿಲಿನ ಬೇಗೆಯಿಂದ ನಾವು ಹೊರಬೇರಬೇಕಾದರೆ ಪ್ರತಿ ಮನೆಗೊಂದು ಸಸ್ಯ ನೆಡಬೇಕಾಗಿರುವುದು ಅನಿವಾರ್ಯ. ಆಮ್ಲಜನಕದ ಕೊರತೆಯಿಂದ ಹೊರ ಬರಬೇಕಾದರೆ ನಾವು ಗಿಡಗಳನ್ನು ಬೆಳೆಸುವುದು ನಮ್ಮ ಜವಾಬ್ದಾರಿ. ಹಾಗಾಗಿ ಗಿಡ ಬೆಳೆಸಿ ನಾಡು ಉಳಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ ಹೇಳಿದರು.
ನಗರದ ಪ್ರೀಯದರ್ಶನಿ ಪ್ರೌಢಶಾಲೆಯ ಆವರಣದಲ್ಲಿ ತ್ರೀಶಾ ಎಜುಕೇಶನ್ ಚಾರಿಟೇಬಲ್ ಮತ್ತು ವೇಲಫರ್ ಟ್ರಸ್ಟ್ ಆಯೋಜಿಸಿದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಆರಂಭಕ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದ ಟ್ರಸ್ಟನ ಅಧ್ಯಕ್ಷೆ ಅಶ್ವಿನಿ ಚವ್ಹಾಣ ನಮ್ಮ ಸಂಸ್ಥೆಯ ಉದ್ದೇಶ ಪ್ರತಿ ಯಾವ ಶಾಲೆಯ ಆವರಣದಲ್ಲಿ 10 ಸಸ್ಯಗಳನ್ನು ನೆಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೀಯದರ್ಶಿನಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಹೆಚ್.ಪೆÇೀಲಕಪಲ್ಲಿ ಹಿರಿಯ ಶಿಕ್ಷಕಿ ಸಿಂಧೂಮತಿ ಬೋಸ್ಲೆ, ಸಮಾಜಸೇವಕರಾದ ಸಿದ್ದರಾಮ ಬೆಳಕೋಟಿ, ಪಾರ್ವತಿ ಹಿರೇಮಠ, ಸಿದ್ದನಗೌಡ ಬಿರಾದಾರ ತುಕಾರಾಮ ಬಿರಾದಾರ, ಅಣ್ಣೆಮ್ಮ ಸುಲೇಗಾವ ಸೇರಿದಂತೆ ಸದಸ್ಯರು, ಶಾಲೆಯ ಮಕ್ಕಳು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.